ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನ : ಐಕಾನ್ ಸ್ಟಾರ್ ಡೈರಿ ಫುಲ್

1 min read

ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನ : ಐಕಾನ್ ಸ್ಟಾರ್ ಡೈರಿ ಫುಲ್

ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ನಿಂದ ಐಕಾನ್ ಸ್ಟಾರ್ ಆಗಿ ಬದಲಾಗಿದ್ದಾರೆ. ಹೀಗಾಗಿ ಅವರು ತಮ್ಮ ಇಮೇಜ್ ಗೆ ತಕ್ಕಂತೆ ಸಿನಿಮಾಗಳನ್ನು ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಸ್ಟಾರ್ ನಿರ್ದೇಶಕರನ್ನು ಲೈನಿನಲ್ಲಿ ನಿಲ್ಲಿಸಿಕೊಂಡಿದ್ದಾರೆ.

ಹೌದು..! ಅಲಾ ವೈಕುಂಠಪುರಂ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಅಲ್ಲು ಅರ್ಜುನ್ ಇಮೇಜ್ ಬದಲಾಗಿದೆ. ಆ ಸಕ್ಸಸ್ ಅನ್ನು ಗಮನದಲ್ಲಿಟ್ಟುಕೊಂಡು ಸತತವಾಗಿ ಸಿನಿಮಾಗಳನ್ನು ಮಾಡಲು ಅವರು ಫಿಕ್ಸ್ ಆಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಮೊದಲನೇ ಭಾಗ ರಿಲೀಸ್ ಗೆ ಸಿದ್ಧವಾಗಿದೆ. ಈ ಚಿತ್ರವನ್ನು ಕ್ರಿಸ್ಮಸ್ ಉಡುಗೊರೆಯಾಗಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದರೆ ಬನ್ನಿ ಪುಷ್ಪಾ ಭಾಗ 2 ಸಿನಿಮಾಗಾಗಿ ಸ್ವಲ್ಪ ಹೆಚ್ಚು ಗ್ಯಾಪ್ ಕೊಡಲು ನಿರ್ಧಾರ ಮಾಡಿದ್ದಾರಂತೆ.

ಪುಷ್ಪ ಮೊದಲು ಭಾಗ ಕಂಪ್ಲೀಟ್ ಆಗುತ್ತಿದ್ದಂತೆ ವೇಣು ಶ್ರೀರಾಮ್ ಮೇಕಿಂಗ್‍ನಲ್ಲಿ ಐಕಾನ್ ಸಿನಿಮಾ ಸೆಟ್ಟೇರಲಿದೆ. ದಸರಾ ಅಂಗವಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಆಗಲಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅಥವಾ ಕೃತಿ ಶೆಟ್ಟಿ ನಾಯಕಿಯರಾಗಿ ನಟಿಸಲಿದ್ದಾರೆ.

allu-arjun  saaksha tv

ಐಕಾನ್ ಸಿನಿಮಾ ಪೂರ್ತಿಯಾಗುತ್ತಿದ್ದಂತೆ ಬನ್ನಿ ಮತ್ತೆ ಪುಷ್ಪ ಸಿನಿಮಾದಲ್ಲಿ ಬ್ಯುಸಿ ಆಗಬೇಕಿತ್ತು. ಆದ್ರೆ ಅಲ್ಲು ಅರ್ಜುನ್ ಇದೀಗ ಮನಸು ಬದಲಿಸಿದ್ದು, ಬೊಯಪಾಟಿ ಶ್ರೀನು ಜೊತೆ ಸಿನಿಮಾ ಮಾಡಲು ಬಯಸಿದ್ದಾರಂತೆ. ಈ ಎರಡು ಚಿತ್ರಗಳು ಮುಗಿದ ನಂತರ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದತ್ತ ಗಮನ ಹರಿಸಲಿದ್ದಾರೆ ಅನ್ನೋ ಟಾಲಿವುಡ್ ನ ಖಬರ್ ಆಗಿದೆ.

ಅಲ್ಲು ಅರ್ಜುನ್ ಅವರ ಈ ಶೆಡ್ಯೂಲ್ ಅನ್ನು ಗಮನಿಸಿದ್ರೆ ಮುಂದಿನ ಐದು ವರ್ಷ ಫುಲ್ ಬ್ಯೂಸಿ ಆಗಿರೋದು ಗೊತ್ತಾಗುತ್ತಿದೆ.
ಇದಾದ ಬಳಿಕ ಅಲ್ಲು ಅರ್ಜುನ್ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಗೀತಾ ಆಟ್ರ್ಸ್ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ. ಇವರಲ್ಲದೇ ಕೊರಟಾಲ ಶಿವ ಮತ್ತು ಮುರುಗದಾಸ್ ಕೂಡ ಪ್ರಸ್ತುತ ಅಲ್ಲು ಅರ್ಜುನ್ ಗಾಗಿ ಕಥೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd