ಪುಷ್ಪ ಸಿನಿಮಾದ ನಂತರ 15 ಮಿಲಿಯನ್ ಫಾಲೋವರ್ಸ್ ಗಳಿಸಿದ ಅಲ್ಲ..!

1 min read

ಪುಷ್ಪ ಸಿನಿಮಾದ ನಂತರ 15 ಮಿಲಿಯನ್ ಫಾಲೋವರ್ಸ್ ಗಳಿಸಿದ ಅಲ್ಲ..!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ..  ಬೇರೆ ಬೇರೆ ರಾಜ್ಯಗಳಲ್ಲೂ ಅಲ್ಲು ಫ್ಯಾನ್ಸ್ ಇದ್ದಾರೆ.. ಸೋಷಿಯಲ್ ಮೀಡಿಯಾದಲ್ಲೂ ಅಲ್ಲುಗೆ ಕೋಟ್ಯಾಂತರ ಫಾಲೋವರ್ಸ್ ಇದ್ಧಾರೆ…

ಈ ನಡುವೆ  ಅಲ್ಲು ಅಭಿನಯದ ಪುಷ್ಪ ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 17 ಕ್ಕೆ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಪುಷ್ಪ ಸಿನಿಮಾ ಪ್ರಸ್ತುತ ಅಮೆಜಾನ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ..

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿರುವ ಪುಷ್ಪ ಸಿನಿಮಾ ಹಿಂದಿಯಲ್ಲೇ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಸಿನಿಮಾದ ನಂತರ ಅಲ್ಲು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು , ಭಾರತದ ಮೂಲೆ ಮೂಲೆಗಳಲ್ಲಿ ಅವರಿಗೆ ಹೊಸ ಹೊಸ ಫ್ಯಾನ್ಸ್ ಆಗಿದ್ದಾರೆ..

ಹೌದು.. ಅವರ ಅಭಿಮಾನಿಗಳ ಸಂಖ್ಯೆ ಏರಿಕೆಯಾಗ್ತಿದ್ದು,  ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳ ಸಂಖ್ಯೆ 15 ಮಿಲಿಯನ್  ಅಂದ್ರೆ ಒಂದೂವರೆ ಕೋಟಿ ಆಗಿದ್ದು , ಅಲ್ಲು ಅರ್ಜುನ್ ಧನ್ಯವಾದಗಳನ್ನ ಅರ್ಪಿಸಿದ್ದಾರೆ..

ಅಲ್ಲು ಇನ್ಸ್ಟಾದಲ್ಲಿ 1.5 ಕೋಟಿ ಫಾಲೋವರ್ಸ್ ಆಗಿದ್ದಾರೆ.. ಈ ಬಗ್ಗೆ ಅಲ್ಲು ಅರ್ಜುನ್ ಸಂತಸ ವ್ಯಕ್ತಪಡಿಸಿದ್ದಾರೆ.. ಅಲ್ಲದೇ ನಿಮ್ಮ ಎಲ್ಲರ ಪ್ರೀತಿಗೆ ನಾನು ಆಭಾರಿ. ಹ್ಯಾಪಿ ಸಂಕ್ರಾಂತಿ ಎಂದು ವಿಷ್ ಮಾಡಿ ತಮ್ಮ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd