Amarnath Yatra | ಅಮರನಾಥ್ ದಲ್ಲಿ ಮೇಘಸ್ಫೋಟ: 15 ಸಾವು, 40 ನಾಪತ್ತೆ!
ಕಾಶ್ಮೀರದ ಅಮರನಾಥ ಗುಹೆಯ ಬಳಿ ನಡೆದ ಘಟನೆ
ಮುಂದಿನ ಸೂಚನೆ ಬರುವವರೆಗೂ ಯಾತ್ರೆ ಸ್ಥಗಿತ
ಶುಕ್ರವಾರ ಸಂಜೆ 5 : 30 ಸುಮಾರಿಗೆ ಮೇಘಸ್ಫೋಟ
ಕೊಚ್ಚಿ ಹೋದ ತಂಗುದಾಣ ಮತ್ತು ಶೆಡ್, ಅಂಗಡಿಗಳು
ಶ್ರೀನಗರ : ಅಮರನಾಥ ಗುಹೆಯ ಬಳಿ ಶುಕ್ರವಾರ ಮೇಘಸ್ಫೋಟವಾಗಿದ್ದು, ಈವರೆಗೂ 15 ಮಂದಿ ಮೃತಪಟ್ಟಿದ್ದು, 40 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಹೀಗಾಗಿ ಮುಂದಿನ ಸೂಚನೆವರೆಗೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಸಂಜೆ 5 : 30 ರ ಸುಮಾರಿಗೆ ಮೇಘಸ್ಫೋಟವಾಗಿದ್ದು, ದೇಗುಲದ ಸಮೀಪವಿರುವ ತಂಗುದಾಣಗಳು ಮತ್ತು ಶೆಡ್ ಹಾಗೂ ಅಂಗಡಿಗಳು ಕೊಚ್ಚಿಹೋಗಿವೆ.
ವಿಪತ್ತು ನಿರ್ವಹಣಾ ಸಂಸ್ಥೆಗಳು ಕೂಡಲೇ ರಕ್ಷಣ ಕಾರ್ಯಾಚರಣೆ ನಡೆಸಿದ್ರೂ ಕಷ್ಟಕರವಾದ ಭೂಪ್ರದೇಶವಾಗಿರುವುದಿಂದ ರಾತ್ರಿ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗಿದೆ.
ಇಂದು ಮುಂಜಾನೆಯಿಂದಲೇ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.
ಗಾಯಾಳುಗಳನ್ನು ಸೇನಾ ಹೆಲಿಕಾಪ್ಟರ್ ಗಳ ಮೂಲಕ ಸಾಗಿಸಲಾಗುತ್ತಿದೆ.
ಸದ್ಯದ ಪರಿಸ್ಥಿತಿ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಧಾನಿಗಳಿಗೆ ಮಾಹಿತಿ ನೀಡಿದ್ದಾರೆ.