ನಿಯಮ ಉಲ್ಲಂಘನೆ – ಅಮೆಜಾನ್ ಗೆ 6,500 ಕೋಟಿ ರೂ. ದಂಡ..!
ಲಂಡನ್: ಇ ಕಾಮರ್ಸ್‍ನ ದೈತ್ಯ ಅಮೆಜಾನ್ ಸಂಸ್ಥೆಗೆ ಯೂರೋಪಿಯನ್ ಕಂಪನಿಯು 6,500 ಕೋಟಿ ರೂಪಾಯಿ ದಂಡವನ್ನ ವಿಧಿಸಿದೆ.. ಹೌದು ದತ್ತಾಂಶ ಸಂರಕ್ಷಣಾ ನಿಯಮವನ್ನು (ಜಿಡಿಪಿಆರ್) ಉಲ್ಲಂಘಿಸಿ ವೈಯಕ್ತಿಕ ದತ್ತಾಂಶ ಬಳಸಿದ್ದಕ್ಕಾಗಿ ಯುರೋಪಿಯನ್ ಒಕ್ಕೂಟವು ‘ಅಮೆಜಾನ್ ಡಾಟ್ ಕಾಂ’ಗೆ 886.6 ದಶಲಕ್ಷ ಡಾಲರ್ (ಸುಮಾರು ರೂ. 6,500 ಕೋಟಿ) ದಂಡ ವಿಧಿಸಿದೆ.
ಲಕ್ಸೆಂಬರ್ಗ್‌ನ ರಾಷ್ಟ್ರೀಯ ದತ್ತಾಂಶ ಸಂರಕ್ಷಣಾ ಆಯೋಗವು (ಸಿಎನ್‌ಪಿಡಿ) ಕಂಪನಿಯ ಯುರೋಪ್ ಘಟಕಕ್ಕೆ ದಂಡ ವಿಧಿಸಿ ಜುಲೈ 16ರಂದು ಆದೇಶಿಸಿತ್ತು ಎಂದು ಅಮೆಜಾನ್‌ತಿಳಿಸಿದೆ. ಆಯೋಗದ ನಿರ್ಧಾರವು ಸರಿಯಾದ ಕ್ರಮವಲ್ಲ ಎಂದು ಭಾವಿಸುತ್ತೇವೆ. ಈ ವಿಚಾರದಲ್ಲಿ ಬಲವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದೂ ಕಂಪನಿ ತಿಳಿಸಿದೆ.
ಲಕ್ಸೆಂಬರ್ಗ್‌ನ ರಾಷ್ಟ್ರೀಯ ದತ್ತಾಂಶ ಸಂರಕ್ಷಣಾ ಆಯೋಗವು (ಸಿಎನ್‌ಪಿಡಿ) ಕಂಪನಿಯ ಯುರೋಪ್ ಘಟಕಕ್ಕೆ ದಂಡ ವಿಧಿಸಿ ಜುಲೈ 16ರಂದು ಆದೇಶಿಸಿತ್ತು ಎಂದು ಅಮೆಜಾನ್‌ತಿಳಿಸಿದೆ. ಕಂಪನಿಗಳು ವೈಯಕ್ತಿಕ ದತ್ತಾಂಶವನ್ನು ಬಳಸುವ ಮೊದಲು ಜನರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಭಾರಿ ದಂಡ ತೆರಬೇಕು ಎಂದು ದತ್ತಾಂಶ ಸಂರಕ್ಷಣಾ ನಿಯಮದಲ್ಲಿ ಉಲ್ಲೇಖವಾಗಿದೆ.