ಬೆಂಗಳೂರಲ್ಲಿ Amazon Food ಡಿಲೆವರಿ: Prime ಸದಸ್ಯರಿಗೆ ಅಮೇಜಿಂಗ್ ಆಫರ್..!
ದೈತ್ಯ ಆನ್ ಲೈನ್ ತಾಣವಾಗಿರುವ ಅಮೆಜಾನ್ ತರಕಾರಿ, ಹಣ್ಣು ಹಂಪಲು, ಫರ್ನಿಚರ್, ಕಾಸ್ಮೆಟಿಕ್ಸ್ ಹೀಗೆ ಪ್ರತಿಯೊಂದು ವಸ್ತುವಿನ ಮಾರಾಟದಿಂದ ಹಿಡಿದು ಫುಡ್ ಡಿಲೆವರಿ, ಡಿಜಿಟಲ್ ಮೀಡಿಯಾದಲ್ಲೂ ಭಾರೀ ದೊಡ್ಡ ಕಂಪನಿಯಾಗಿ ಗುರುತಿಸಿಕೊಂಡಿದೆ. ಇದೀಗ ಮತ್ತೊಂದು ಹೊಸ ಸೇವೆ ಆರಂಭಿಸಿದೆ. ಹೌದು ಅಮೆಜಾನ್ ಇದೀಗ ಸಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಹಾರ ಡೆಲಿವರಿ ಸೇವೆಯಾಗಿರುವ ಅಮೆಜಾನ್ ಫುಡ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ದೈತ್ಯ ಫುಡ್ ಡಿಲೆವರಿ ಕಂಪನಿಗಳಿಗೆ ಟಕ್ಕರ್ ಕೊಡೋಕೆ ರೆಡಿಯಾಗಿದೆ. ಇನ್ನೂ ವಿಜಯನಗರ, ಕೋರಮಂಗಲ, MG Road, ಜಯನಗರ, ಜೆಪಿ ನಗರ, ಸೇರಿದಂತೆ ಬೆಂಗಳೂರಿನ 62 ಪಿನ್ ಕೋಡ್ ಗಳಲ್ಲಿ ತನ್ನ ಸೇವೆಯನ್ನು ಶುರುಮಾಡಿದೆ.
ಛತ್ತೀಸ್ ಗಢ – 13 ಮಂದಿ ತೃತೀಯಲಿಂಗದವರು ಕಾನ್ ಸ್ಟೇಬಲ್ ಗಳಾಗಿ ಆಯ್ಕೆ..!
ಆದ್ರೆ ಇಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಬಂಪರ್ ಆಫರ್ ಕೊಡಲಾಗಿದೆ. ಅದೇನೆಂದ್ರೆ ಅಮೆಜಾನ್ ಪ್ರೈಮ್ ಸದಸ್ಯರು ತಮ್ಮ ಎಲ್ಲಾ ಆರ್ಡರ್ಗಳ ಬಿಲ್ ಕುಲ್ ಡೆಲಿವರಿ ಪಡೆಯಬಹುದಾಗಿದೆ. ಇತರ ಗ್ರಾಹಕರು ಅಮೆಜಾನ್ ಫುಡ್ ಗೆ ಡೆಲಿವರಿ ಶುಲ್ಕ ರೂ ಕನಿಷ್ಠ 19 ಪಾವತಿ ಮಾಡಬೇಕಾಗುತ್ತದೆ. ಆದರೆ, ಸೀಮಿತ ಅವಧಿಯ ಅಂಗವಾಗಿ, ಎಲ್ಲಾ ಗ್ರಾಹಕರಿಗೂ ಪ್ಯಾಕೇಜಿಂಗ್ ಶುಲ್ಕ ಮನ್ನಾ ಮಾಡಲಾಗಿದೆ. ಗ್ರಾಹಕರು ರೆಸ್ಟೋರೆಂಟ್ ಗಳಿಂದ ಆಕರ್ಷಕ ಕೊಡುಗೆಗಳು ಮತ್ತು ಅಮೆಜಾನ್ ಪೇ ಕ್ಯಾಶ್ ನ್ಯಾಕ್ ಗಳನ್ನು ಪಡೆಯಬಹುದಾಗಿದೆ. ಅಮೆಜಾನ್ ಫುಡ್ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆ ವರೆಗೆ ಆರ್ಡರ್ ತೆಗೆದುಕೊಳ್ಳುತ್ತದೆ. ಅಮೆಜಾನ್ ಫುಡ್ ರಾಷ್ಟ್ರೀಯ ಮಳಿಗೆಗಳು ಮತ್ತು ಸ್ಥಳೀಯ ಹೋಟೆಲ್ಗಳನ್ನು ಒಳಗೊಂಡಂತೆ ನಗರದ ಕೆಲವು ಉನ್ನತ ರೆಸ್ಟೋರೆಂಟ್ಗಳನ್ನು ಹೊಂದಿರಲಿದೆ.