ಟೆಕ್ಸಾಸ್ ನ ವಿವಾದಾತ್ಮಕ ಗರ್ಭಪಾತ ನಿಷೇಧ ಕಾಯ್ದೆಗೆ ತಡೆ – ಮಹಿಳೆಯರಿಗೆ ಗೆಲುವು

1 min read

ಟೆಕ್ಸಾಸ್ ನ ವಿವಾದಾತ್ಮಕ ಗರ್ಭಪಾತ ನಿಷೇಧ ಕಾಯ್ದೆಗೆ ತಡೆ – ಮಹಿಳೆಯರಿಗೆ ಗೆಲುವು

ಯುಎಸ್ ನ ಟೆಕ್ಸಾಸ್ ನಲ್ಲಿ ಜಾರಿಯಲ್ಲಿರುವ ವಿವಾದಾತ್ಮಕ ಗರ್ಭಪಾತ ನಿಷೇಧ ಕಾಯ್ದೆ ತಡೆಗೆ ಫೆಡರಲ್ ನ್ಯಾಯಾಧೀಶರು ಆದೇಶಿಸಿದ್ದಾರೆ. ಯುಎಸ್ ಜಿಲ್ಲಾ ನ್ಯಾಯಾಧೀಶರಾದ ರಾಬರ್ಟ್ ಪಿಟ್ಮನ್ ಅವರು ನೀಡಿರುವ ಆದೇಶವು ಟೆಕ್ಸಾಸ್ ಕಾನೂನನ್ನ ಅಮಾನುತುಗೊಳಿಸಿದೆ. ಈ ಕಾನೂನಿನ ಮೇಲೆ ನಿರ್ಬಂಧ ಹೇರಬೇಕೆಂದು ಅನೇಕ ಮಹಿಳೆಯರು ಹೋರಾಟ ನಡೆಸಿದ್ದರು. ಇದೀಗ ನ್ಯಾಯಾಲಲಯದ ಆದೇಶದಿಂದ ಟೆಕ್ಸಾಸ್ ಮಹಿಳೆಯರಿಗೆ ಜಯ ಸಿಕ್ಕಂತಾಗಿದೆ.  ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಕೂಡ ಈ ಕಾನೂನನ್ನ ತೆಗೆದುಹಾಕುವ ಕುರಿತಾಗಿ ಮಾತನಾಡಿದ್ದರು.

ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಗರ್ಭಪಾತ ವಿರೋಧಿ ಕಾಯ್ದೆ ಅಮೆರಿಕದ ಕಠಿಣ ಕಾನೂನಾಗಿದೆ. ಯುಎಸ್ ಸುಪ್ರೀಂ ಕೋರ್ಟ್ ಆ ಕಾನೂನನ್ನು ಮುಂದುವರಿಸಲು ಅನುಮತಿಸಿದ ನಂತರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸರ್ಕಾರಕ್ಕೆ ಇದು ಬಹಳ ದೊಡ್ಡ ಸವಾಲಾಗಿತ್ತು. ಇದೀಗ 6 ವಾರಗಳ ಗರ್ಭಪಾತ ನಿಷೇಧ ಕಾನೂನಿಗೆ ತಡೆ ನೀಡಲಾಗಿದೆ.

ಭ್ರೂಣದಲ್ಲಿ ಹೃದಯಚಟುವಟಿಕೆ ಪತ್ತೆಯಾದ ಬಳಿಕ ಗರ್ಭಪಾತ ನಡೆಸುವುದನ್ನು ನಿಷೇಧಿಸಲಿದೆ. ಆರೋಪ ಸಾಬೀತಾದರೆ 10 ಸಾವಿರ ಅಮೆರಿಕ ಡಾಲರ್‌ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿತ್ತು. ಗರ್ಭಪಾತ ಕುರಿತಂತೆ ಮಹಿಳೆಯರ ಸಾಂವಿಧಾನಿಕ ಹಕ್ಕಿನ ಮೇಲೆ ಈ ಕಾಯ್ದೆಯ ಮೂಲಕ ಟೆಕ್ಸಾಸ್‌ ದಾಳಿ ನಡೆಸಿದೆ ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿತ್ತು.

ಜೋ ಬೈಡನ್ ಸರ್ಕಾರದ ನ್ಯಾಯಾಂಗ ಇಲಾಖೆ ಸೆಪ್ಟೆಂಬರ್ 9ರಂದು ಟೆಕ್ಸಾಸ್ ಮೇಲೆ ಮೊಕದ್ದಮೆ ಹೂಡಿತ್ತು. ಹಾಗೇ, ಕಾನೂನಿನ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿತ್ತು. ಅಕ್ಟೋಬರ್ 1 ವಿಚಾರಣೆಯ ಸಮಯದಲ್ಲಿ ಈ ಕ್ರಮವು ಯುಎಸ್ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿತ್ತು. ಸೆಪ್ಟೆಂಬರ್ 1 ರಂದು ಯುಎಸ್ ಸುಪ್ರೀಂ ಕೋರ್ಟ್ ಸಂಪ್ರದಾಯವಾದಿ ನ್ಯಾಯಮೂರ್ತಿಗಳು ಈ ಕಾಯ್ದೆ ಜಾರಿಯಲ್ಲಿದ್ದರೆ ತಪ್ಪೇನೂ ಇಲ್ಲ ಎಂದಿದ್ದರು.

ಇಸ್ರೇಲ್ ನಲ್ಲಿ ಪತ್ತೆಯಾಗಿದೆ 2,700 ವರ್ಷಗಳಷ್ಟು ಹಳೆಯ ಶೌಚಾಲಯ

ಪಾಕಿಸ್ತಾನದಲ್ಲಿ ಭೂಕಂಪನ  : ಸುಮಾರು 15 ಮಂದಿ ಸಾವು

ಉಗ್ರರನ್ನು ಪೋಷಿಸುವ ಪಾಕಿಸ್ತಾನ ಸಂತ್ರಸ್ತರಂತೆ ನಟಿಸುವ ಕಪಟಿ ದೇಶ – ಭಾರತ  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd