ಇಸ್ರೇಲ್ ನಲ್ಲಿ ಪತ್ತೆಯಾಗಿದೆ 2,700 ವರ್ಷಗಳಷ್ಟು ಹಳೆಯ ಶೌಚಾಲಯ

1 min read

ಇಸ್ರೇಲ್ ನಲ್ಲಿ ಪತ್ತೆಯಾಗಿದೆ 2,700 ವರ್ಷಗಳಷ್ಟು ಹಳೆಯ ಶೌಚಾಲಯ

ಇಸ್ರೇಲ್ ನ ಜೆರುಸಲೆಂನಲ್ಲಿ 2700 ವರ್ಷಗಳಷ್ಟು  ಹಳೆಯದಾದ ಶೌಚಾಲಯವನ್ನು ಪುರಾತನ ಇಲಾಖೆ ಅಧಿಕಾರಿಗಳು  ಪತ್ತೆ ಹಚ್ಚಿದ್ದು, ಇದರ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಶೌಚಾಲಯದ ಫೋಟೊಗಳನ್ನು ಬಿಡುಗಡೆ ಮಾಡಿರುವ ಸ್ಥಳೀಯ ಆಡಳಿತ  ಈ ಬಗ್ಗೆ ಮಾಹಿತಿ ನೀಡಿದೆ. ಇನ್ನೂ ಈ ಫೋಟೋಗಳು ಆಗಿನ ಕಾಲದಲ್ಲಿಯೂ  ಈಗಿನ ಆಧುನಿಕ  ಮಾದರಿಯ ಶೌಚಾಲಯಗಳು ಇದ್ದವು ಎಂಬುದನ್ನು ತೋರಿಸಿದೆ.

ಕಲ್ಲನ್ನು ಕತ್ತರಿಸಿ ಆರಾಮವಾಗಿ ಕುಳಿತುಕೊಳ್ಳಲು ಆಯತಾಕಾರದಲ್ಲಿ ಮಾಡಲಾದ ಶೌಚಾಲಯ ಇದಾಗಿದ್ದು ಇದರ ಕೆಳಗೆ ಸೆಪ್ಟಿಕ್ ಟ್ಯಾಂಕ್ ಕೂಡ ಪತ್ತೆಯಾಗಿದೆ ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಪುರಾತನ ಇಲಾಖೆಯ ಯಾಕೋವ್ ಬಿಲ್ಲಿಗ್ ಅವರು ಶೌಚಾಲಯ ಪತ್ತೆಯಾಗಿರುವ ಜಾಗದಲ್ಲಿ ಇನ್ನೂ ಕೂಡ ಉತ್ಕನನ ಮುಂದುವರೆದಿದೆ. ಈಗ ಸಿಕ್ಕಿರುವ ಪಳಿಯುಳಿಕೆಗಳನ್ನು ನೋಡಿದರೆ ಜೇರುಸಲೆಂನಲ್ಲಿ ಶ್ರೀಮಂತರು ವಾಸವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd