ಚೀನಾದ ಕರಾವಳಿ ನಗರವಾದ ಶಾಂಘೈನಿಂದ ನೂರು ಕಿ.ಮೀಗಿಂತಲೂ ಸನಿಹದಲ್ಲಿ ಅಮೆರಿಕಾದ ಯುದ್ಧ ವಿಮಾನ ಹಾರಾಟ ನಡೆಸಿದ್ದು, ಇಡೀ ಜಗತ್ತು ಹುಬ್ಬೇರಿಸುವಂತೆ ಮಾಡಿದೆ. ಅಲ್ಲದೇ ಅದೇ ಜಾಗದಲ್ಲಿ ಅಮೆರಿಕಾದ ಯುದ್ಧ ನೌಕೆ ಬೀಡು ಬಿಟ್ಟುದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಅಮೆರಿಕ- ಚೀನಾದಲ್ಲಿ ರಾಯಭಾರ ಕಚೇರಿಗಳ ಸ್ಥಗಿತ ಹಾಗೂ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ವೈಮಸ್ಸಿನ ನಡುವೆಯೇ ಈ ಬೆಳವಣಿಗೆಯಾಗಿದ್ದು ಅಚ್ಚರಿ ಮೂಡಿಸುವುದರ ಜೊತೆಗೆ ಆತಂಕವನ್ನೂ ಹೆಚ್ಚು ಮಾಡಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ಚೀನಾದಿಂದ ಪ್ರವೇಶಿಸುವ ಮಾರ್ಗದಲ್ಲಿ ಚೀನಿ ಯೋಧರು ಕೂಡ ಯುದ್ಧಾಭ್ಯಾಸದಲ್ಲಿ ನಿರತರಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನಗಳು ಚೀನಾಗೆ ಇಷ್ಟು ಹತ್ತಿರದಲ್ಲಿ ಹಾರಾಟ ನಡೆಸಿರುವುದಾಗಿಯೂ ಮೂಲಗಳು ತಿಳಿಸಿವೆ. ಎಪಿ- 8 ವಿಮಾನ ಹಾಗೂ ಇಪಿ-3ಇ ವಿಮಾನಗಳು ಹಾರಾಟ ನಡೆಸಿದ್ದು, ತೈವಾನ್ ಕೊಲ್ಲಿ ಮೂಲಕ ಶಾಂಘೈ ಸಮೀಪಿಸಿವೆ ಎಂದು ಹೇಳಲಾಗಿದೆ.
ಕರಾವಳಿಯ ಜಾನಪದ ಕ್ರೀಡೆಗೆ ಮೈಸೂರಿನಲ್ಲಿ ಅದ್ದೂರಿ ವೇದಿಕೆ: ಅಕ್ಟೋಬರ್ 18 ರಿಂದ ವಿಜಯ ದಶಮಿ ಕರೆಯಲ್ಲಿ ಕಂಬಳದ ಗತ್ತು ನೋಡಲು ಸನ್ನದ್ಧರಾಗಿ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೆರುಗು ಸಿಗಲಿದೆ. ಅರಮನೆ ನಗರಿಯ ಅಂಗಳದಲ್ಲಿ ಅಕ್ಟೋಬರ್ 18 ಮತ್ತು...








