ಅಮೆರಿಕಾದಿಂದ ಭಾರತಕ್ಕೆ ಬಂದ 5ನೇ ಹಂತದ ವೈದ್ಯಕೀಯ ಉಪಕರಣಗಳು

1 min read

ಅಮೆರಿಕಾದಿಂದ ಭಾರತಕ್ಕೆ ಬಂದ 5ನೇ ಹಂತದ ವೈದ್ಯಕೀಯ ಉಪಕರಣಗಳು

ನವದೆಹಲಿ : ಭಾರತದಲ್ಲಿ ಕೊರೊನಾ 2ನೇ ಅಲೆ ಭೀಕರವಾಗಿದ್ದು, ಮುಖ್ಯವಾಗಿ ಬೆಡ್ ಕೊರತೆ ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ಈ ನಡುವೆ ವಿಶ್ವದ ದೊಣ್ಣ ಅಮೆರಿಕಾ ಭಾರತಕ್ಕೆ ನೆರವಾಗುತ್ತಿದ್ದು, ಇದೀಗ ಅಮೆರಿಕಾದಿಂದ  ಭಾರತಕ್ಕೆ 5ನೇ ಅಂತದಲ್ಲಿ ವೈದ್ಯಕೀಯ ಉಪಕರಣಗಳು ಬಂದಿವೆ. 545 ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಅಮೆರಿಕಾದಿಂದ ಭಾರತಕ್ಕೆ ಬಂದು ತಲುಪಿದೆ.

ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದು, ಅಮೆರಿಕದಿಂದ 5ನೇ ಹಂತದ ವೈದ್ಯಕೀಯ ಉಪಕರಣಗಳು ಬಂದಿವೆ. 545 ಆಕ್ಸಿಜನ್ ಕಾನ್ಸಂಟ್ರೇಟರ್ ಮಂಗಳವಾರ ಆಗಮಿಸಿದೆ ಎಂದು ಹೇಳಿದ್ದಾರೆ. ಶನಿವಾರ ಅಮೆರಿಕದಿಂದ ಭಾರತಕ್ಕೆ 1000 ಆಕ್ಸಿಜನ್ ಸಿಲಿಂಡರ್‌, ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನ ಆಗಮಿಸಿತ್ತು. ಭಾನುವಾರ 1.25 ಲಕ್ಷ ರೆಮಿಡಿಸಿವಿರ್ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಬಂದಿತ್ತು.

ಮತ್ತೊಂದೆಡೆ ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಹೊತ್ತು ಸಾಗಬೇಕಿರುವ 2 ವಿಮಾನಗಳು ತಾಂತ್ರಿಕ ಕಾರಣದಿಂದ ತಡವಾಗಿವೆ. ಬುಧವಾರ ಅವು ದೇಶವನ್ನು ತಲುಪುವ ನಿರೀಕ್ಷೆ ಇದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಕಳೆದ ವಾರ ಅಮೆರಿಕದಿಂದ ಎನ್ 95 ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿತ್ತು. ಇದುವರೆಗೂ ಒಟ್ಟು 5 ವಿಮಾನಗಳು ದೇಶಕ್ಕೆ ಆಗಮಿಸಿದ್ದು, ತುರ್ತು ಅಗತ್ಯವಿರುವ ವೈದ್ಯಕೀಯ ಉಪಕರಣಗಳ ವ್ಯವಸ್ಥೆಯನ್ನು ಅಮೆರಿಕ ಮಾಡಿದೆ.

ದೇಶದಲ್ಲಿ 2 ಕೋಟಿ ದಾಟಿದ ಸೋಂಕು ಪ್ರಕರಣ – ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಅತಿ ಹೆಚ್ಚು  ಸಕ್ರಿಯ ಕೇಸ್ ಗಳು ಪತ್ತೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd