ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರುವುದು ಸೂಕ್ತ – ಅಮೆರಿಕಾ ಸಲಹೆ

1 min read
lockdown

ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರುವುದು ಸೂಕ್ತ – ಅಮೆರಿಕಾ ಸಲಹೆ

ಅಮೆರಿಕಾ : ಭಾರತದಲ್ಲಿ ಕೋವಿಡ್ 2ನೇ ಅಲಿಯ ಪರಿಸ್ಥಿತಿ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿದೆ. ಈ ನಡುವೆ ಹೆಚ್ಚಾಗುತ್ತಿರುವ ಕೊರೋನಾ ಹಾವಳಿ ಕಂಟ್ರೋಲ್ ಮಾಡುವುದಕ್ಕೆ ಇರುವುದು ಒಂದೇ ದಾರಿ ದೇಶ ಸಂಪೂರ್ಣ ಲಾಕ್ ಡೌನ್ ಮಾಡುವುದು ಎಂದು  ಇತ್ತೀಚೆಗೆ ಸುಪ್ರೀಕೋರ್ಟ್ ಸಲಹೆ ನೀಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಜನರ ಹಿತಕ್ಕಾಗಿ ಇದೇ ಸರಿ ಎಂದು ಅಭಿಪ್ರಾಯ ಹೊರಹಾಕಿದ್ದರು.

ಇದೀಗ  ವಿಶ್ವದ ದೊಡ್ಡಣ್ಣ ಅಮೆರಿಕಾ ಸಹ ಭಾರತಕ್ಕೆ ಇದೇ ಸಲಹೆ ಕೊಟ್ಟಿದೆ. ವೈರಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ, ದೇಶಾದ್ಯಂತ ಲಾಕ್ ಡೌನ್ ಹೇರಲು ಶಿಫಾರಸು ಮಾಡಿದ್ದಾರೆ. ಅಲ್ಲದೇ ಭಾರತದಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಆಗಿರುವ ಡಾ. ಫೌಸಿ ಹೇಳಿದ್ದಾರೆ.

ಇದೇ ವೇಲೆ ಸಾಮೂಹಿಕ ಲಸಿಕೆ ಅಭಿಯಾನ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ.  ಆಸ್ಪತ್ರೆಗಳು, ಬೆಡ್ , ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಿಂದ ನಿಜವಾಗಿಯೂ ಹತಾಶದಾಯಕ ಪರಿಸ್ಥಿತಿಯಾಗಿ ಹೊರಹೊಮ್ಮಿದೆ. ಆದ್ದರಿಂದ ಇತರ ರಾಷ್ಟ್ರಗಳು ಭಾರತದ ನೆರವಿಗೆ ನಿಲ್ಲಬೇಕಾಗಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ಹಾಕಬೇಕಾಗಿದೆ.

ಭಾರತವೇ ತಯಾರಿಸಿರುವ ಎರಡು ಲಸಿಕೆಗಳಿವೆ.ಇದರೊಂದಿಗೆ ಇತರ ರಾಷ್ಟ್ರಗಳಿಂದ ಲಸಿಕೆ ಖರೀದಿಸಬೇಕು, ಭಾರತಕ್ಕೆ ಲಸಿಕೆ ಪೂರೈಸಲು ಅಮೆರಿಕ, ರಷ್ಯಾದಂತಹ ರಾಷ್ಟ್ರಗಳು ಮುಂದಾಗಬೇಕು ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡುವುದೇ ಉತ್ತಮ. ಕಳೆದ ವರ್ಷ ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳು ನಿಗದಿತ ಅವಧಿವರೆಗೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದರಿಂದ ಆ ರಾಷ್ಟ್ರಗಳಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆರು ತಿಂಗಳ ಕಾಲ ಲಾಕ್ ಡೌನ್ ಮಾಡಬೇಕಾಗಿಲ್ಲ, ಕೆಲವು ವಾರಗಳವರೆಗೂ ಲಾಕ್ ಡೌನ್ ಮಾಡಬೇಕಾಗಿದೆ. ಆಗ ಮಾತ್ರ ಸೋಂಕು ಹರಡದಂತೆ ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಸಾಧ್ಯವಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯದ ಜನರಿಗೆ ಮತ್ತೊಂದು ಶಾಕ್… ಇಷ್ಟಕ್ಕೆ ನಿಲ್ಲಲ್ಲಾ ಹೆಮ್ಮಾರಿ ಆರ್ಭಟ.. 3ನೇ ಅಲೆ ಅಪ್ಪಳಿಸಲಿದೆ.. !

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd