ಕೋವಿಡ್ ಸೋಂಕು ತನಗೂ ತಗುಲಬಹುದೆಂಬ ಭೀತಿಯಲ್ಲಿ ಮಗನನ್ನು ಕಾರ್ ಟ್ರಂಕ್ ನಲ್ಲಿ ಬಂದ್ ಮಾಡಿದ ತಾಯಿ

1 min read

ಕೋವಿಡ್ ಸೋಂಕು ತನಗೂ ತಗುಲಬಹುದೆಂಬ ಭೀತಿಯಲ್ಲಿ ಮಗನನ್ನು ಕಾರ್ ಟ್ರಂಕ್ ನಲ್ಲಿ ಬಂದ್ ಮಾಡಿದ ತಾಯಿ

ಅಮೆರಿಕಾ : ತನಗೆ ಕೋವಿಡ್ ಸೋಂಕು ತಗಲಬಾರದೆಂದು ತಾಯೊಯೊಬ್ಬಳು ತನ್ನ ಕೋವಿಡ್ ಸೋಂಕಿತ ಮಗನನ್ನ ಕಾರ್ ನ ಟ್ರಂಕ್ ನಲ್ಲಿ ಬಂದ್ ಮಾಡಿದ್ದ ಘಟನೆ ಅಮೆರಿಕಾದ ಟೆಕ್ಸಾಸ್‌ನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಶಿಕ್ಷಕಿಯಾಗಿರುವ 41 ವರ್ಷದ ಸಾರಾ ಭೀಮ್ ಎಂಬಾಕೆ ಈ ರೀತಿ ನಡೆದುಕೊಂಡಿದ್ದಾಳೆ.. ಈಕೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು , ಕೌಂಟಿಯ ಡ್ರೈವ್-ಥ್ರೂ ಕೋವಿಡ್-19 ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಳು. ಅಲ್ಲಿದ್ದ ಸಿಬ್ಬಂದಿ ಕಾರಿನ ಒಳಗಡೆಯಿಂದ ಬರುತ್ತಿದ್ದ ಶಬ್ಧವನ್ನು ಆಲಿಸಿದ್ದಾರೆ. ಆಗ ಆಕೆ ತನ್ನ ಮಗನನ್ನು ಟ್ರಂಕ್‌ನ ಒಳಗಡೆ ಬಂಧಿಸಿರುವ ವಿಷಯ ಬಹಿರಂಗ ಪಡಿಸಿದ್ದಾಳೆ.

ಮಹಿಳೆಯ 13 ವರ್ಷದ ಮಗನಿಗೆ ಕೋವಿಡ್-19 ಸೋಂಕು ತಗುಲಿದ್ದು, ಸೋಂಕು ತನಗೆ ಹರಡಬಾರದೆಂಬ ಕಾರಣಕ್ಕೆ ಆತನನ್ನು ಕಾರ್‌ನ ಟ್ರಂಕ್ ಒಳಗಡೆ ಬಂಧಿಸಿದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನು ಸಾಬೀತುಪಡಿಸಲು ಆಕೆ ಮಗನನ್ನು ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾಳೆ.
ಆದರೆ ಮಹಿಳೆಯ ಬೇಜವಾಬ್ದಾರಿ ಕೃತ್ಯಕ್ಕೆ ಪೊಲೀಸರು ಕೇಸ್ ದಾಖಲಿಸಿ, ಬಂಧಿಸಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd