ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆದಿತ್ತು. ಈ ಸಂದರ್ಭದಲ್ಲಿ ಈಗ ಅಮೆರಿಕ, ಉಕ್ರೇನ್ ಗೆ ಸಹಾಯ ಮಾಡಲು ಮುಂದಾಗಿದೆ. ಹೀಗಾಗಿ ವಿಶ್ವದ ದೊಡ್ಡಣ್ಣ ತನ್ನ ಬಳಿ ಇದ್ದ ಅತ್ಯಂತ ಶಕ್ತಿಶಾಲಿ ಬ್ರಹ್ಮಾಸ್ತ್ರವನ್ನು ನೀಡಲು ಮುಂದಾಗಿದೆ.
ಶಸ್ತ್ರಾಸ್ತ್ರ ಪೂರೈಕೆ ಮಾಡುವ, ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿಯೇ ಇದೆ. ಹೀಗಾಗಿ ಎಫ್-16 ನ್ನು ನೀಡಲು ಮುಂದಾಗಿದೆ. ಜಗತ್ತಿನಾದ್ಯಂತ ಎಫ್ 16 ಖರೀದಿಗೆ ಹಲವು ದೇಶಗಳು ತುದಿಗಾಲಲ್ಲಿ ನಿಂತಿರುತ್ತವೆ. ಆದರೆ, ಈ ವಿಮಾನವನ್ನು ಉಕ್ರೇನ್‌ಗೆ ಈಗ ಗಿಫ್ಟ್ ಕೊಡಲು ಅಮೆರಿಕ ಮುಂದೆ ಬಂದಿದೆ. ಈ ನಿರ್ಧಾರಕ್ಕೆ ರಷ್ಯಾ ಆಕ್ರೋಶ ವ್ಯಕ್ತವಡಿಸುತ್ತಿದೆ.
ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ಜೊತೆ ಸೇರಿ ಉಕ್ರೇನ್‌ಗೆ ಎಫ್-16 ವಿಮಾನ ಕಳುಹಿಸಲು ಅಮೆರಿಕವು ರೆಡಿಯಾಗಿದೆ. ಅಧಿಕೃತವಾಗಿ ಈ ಬಗ್ಗೆ ಅಮೆರಿಕ ಪತ್ರ ಬರೆದಿದ್ದು, ಸಂಚಲನ ಸೃಷ್ಟಿಯಾಗಿದೆ. ಅಮೆರಿಕದ ಕ್ರಮದ ಬಗ್ಗೆ ರಷ್ಯಾ ಯಾವ ರೀತಿ ಕ್ರಮ ಕೈಗೊಳ್ಳುತ್ತೆ? ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹೀಗಾಗಿ ರಷ್ಯಾ ರಾಷ್ಟ್ರದ ತೀವ್ರ ಆಕ್ರೋಶಕ್ಕೆ ಅಮೆರಿಕ ಕಾರಣವಾಗಿದೆ.