ವಿಶ್ವಸುಂದರಿ ಕಿರೀಟ ಗೆದ್ದ ಅಮೆರಿಕಾದ ಆರ್’ಬೋನಿ ಗೇಬ್ರಿಯಲ್…
ಅಮೆರಿಕದ ಆರ್’ಬೋನಿ ಗೇಬ್ರಿಯಲ್ 2022 ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೆರಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ 71 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ಎಂದು ಘೋಷಿಸಿದ ಕೂಡಲೇ 2021 ರ ವಿಶ್ವ ಸುಂದರಿ ಹರ್ನಾಜ್ ಸಂಧು ಗೇಬ್ರಿಯಲ್ ಅವರಿಗೆ ಕಿರೀಟವನ್ನು ತೊಡಿಸಿದರು. ಜನವರಿ 15ರಂದು ಅಮೆರಿಕದ ನ್ಯೂ ಆರ್ಲಿಯನ್ಸ್‌ನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಈ ಸೌಂದರ್ಯ ಸ್ಪರ್ಧೆಯಲ್ಲಿ ವೆನೆಜುವೆಲಾದ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಆದರು, ಡೊಮಿನಿಕನ್ ರಿಪಬ್ಲಿಕ್‌ನ ಆಂಡ್ರೀನಾ ಮಾರ್ಟಿನೆಜ್ ಎರಡನೇ ರನ್ನರ್ ಅಪ್ ಆದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ದಿವಿತಾ ರೈ ಭಾರತವನ್ನು ಪ್ರತಿನಿಧಿಸಿದ್ದರು. ಟಾಪ್ 16ರಲ್ಲಿ ಸ್ಥಾನ ಪಡೆದಿದ್ದಾಳೆ. ಈ ಅತ್ಯಂತ ಮನಮೋಹಕ ಕಿರೀಟಕ್ಕಾಗಿ 80 ಕ್ಕೂ ಹೆಚ್ಚು ಜನರು ಪೈಪೋಟಿ ನಡೆಸಿದರು. ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಭಾರತಕ್ಕೆ ತಂದರು. ಸುಮಾರು ಎರಡು ದಶಕಗಳ ನಂತರ ಭಾರತಕ್ಕೆ ಈ ಬಿರುದನ್ನು ತಂದ ಕೀರ್ತಿ ಆಕೆಗೆ ಸಿಕ್ಕಿತು.
America’s R’Bonnie Gabriel won the Miss World crown…