‘ಮಗಳ’ ಜೊತೆಗೆ ಅಮೀರ್ ಖಾನ್ 3ನೇ ಮದುವೆ..?
ಮುಂಬೈ : ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಇತ್ತೀಚೆಗಷ್ಟೇ ತಮ್ಮ 2ನೇ ಪತ್ನಿ ಕಿರಣ್ ರಾವ್ ಜೊತೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.. ಡಿವೋರ್ಸ್ ಬಳಿಕ ಅಮೀರ್ ಖಾನ್ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ರು.. ಈ ನಡುವೆ ಅಮೀರ್ ಖಾನ್ ಮೂರನೇ ಮದುವೆಗೆ ತಯಾರಿ ನಡೆಸಿಕೊಂಡಿದ್ದಾರೆ ಎಂಬ ವದಂತಿಗಳು ಭಾರೀ ಸೌಂಡ್ ಮಾಡ್ತಿದೆ..
ಕಿರಣ್ ರಾವ್ ಹಾಗೂ ಅಮಿರ್ ಖಾನ್ ದಂಪತಿಗೆ 9 ವರ್ಷದ ಮಗನಿದ್ದಾನೆ ( ಆಜಾದ್ ಖಾನ್). ಆದ್ರೆ ಇದೀಗ ತಮ್ಮ ಬಹುನಿರೀಕ್ಷೆಯ ಲಾಲ್ ಸಿಂಗ್ ಚಡ್ಡಾ ವೆಬ್ ಸೀರೀಸ್ OTT ಯಲ್ಲಿ ರಿಲೀಸ್ ಆದ ಬಳಿಕ ಈ ನಟಿ ಜೊತೆಗೆ 3ನೇ ಮದುವೆಯಾಗಲಿದ್ದಾರೆಂಬ ಸುದ್ದಿ ಬಿ ಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದೆ..
ಅಷ್ಟಕ್ಕೂ ಆ ನಟಿ ಯಾರು..?
ಅಮೀರ್ ಖಾನ್ ಅವರ ರೂಮರ್ಡ್ ಗರ್ಲ್ ಫ್ರೆಂಡ್ ನಟಿ ಫಾತಿಮಾ ಸನಾ ಶೇಕ್ ಜೊತೆಗೆ ಅಮೀರ್ ಮದುವೆಯಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡ್ತಿವೆ.. ಈ ನಟಿ ಮತ್ಯಾರು ಅಲ್ಲ ಸೂಪರ್ ಹಿಟ್ ಸಿನಿಮಾ ದಂಗಲ್ ನಲ್ಲಿ ಅಮೀರ್ ಖಾನ್ ಗೆ ಮಗಳಾಗಿ ಬಣ್ಣ ಹಚ್ಚಿದ್ದವರು.. ಹೌದು ಇವರನ್ನೇ ಅಮೀರ್ ಮದ್ವೆಯಾಗಲಿದ್ದಾರಂತೆ..
ಅಂದ್ಹಾಗೆ ಅಮೀರ್ ಡಿವೋರ್ಸ್ ಸುದ್ದಿ ಹೊರಬಿದ್ದಾಗಾ ಫಾತಿಮಾ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ರು.. ಸಖತ್ ಟ್ರೋಲ್ ಮಾಡಿದ್ರು.. ಈಕೆಯಿಂದ್ಲೇ ಕಿರಣ್ ಅಮೀರ್ ಮದ್ವೆ ಮುರಿದು ಬಿತ್ತೆಂದು ಕಟುವಾಗಿ ಟೀಕೆಯೂ ಮಾಡಿದ್ರು.. ಆದ್ರೆ ಈಗ ಮತ್ತೊಮ್ಮೆ ಈ ಸುದ್ದಿ ಮುನ್ನೆಲೆಗೆ ಬಂದಿದ್ದು, ಆರಿ ಹೋಗಿದ್ದ ಟ್ರೋಲ್ ಅಗ್ನಿ ಮತ್ತೆ ಹೊತ್ತಿಕೊಂಡಿದ್ದು, ಈ ವದಂತಿಗಳು ತುಪ್ಪ ಸುರಿಯುವ ಕೆಲಸ ಮಾಡ್ತಿವೆ.. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ..