ನವದೆಹಲಿ: ಗಡಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪದೇ ಪದೇ ತರಾಟೆಗೆ ತೆಗೆದುಕೊಳ್ಳುತ್ತಿರುವ ರಾಹುಲ್‍ಗಾಂಧಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಸ ಸವಾಲು ಹಾಕಿದ್ದಾರೆ.
“1962ರಿಂದ ಇಲ್ಲಿಯವರೆಗೆ ಗಡಿ ವಿಚಾರದಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ಚರ್ಚೆಗೆ ನಾವು ಸಿದ್ದರಿದ್ದೇವೆ. ಈ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆಗೆ ನಾವು ರೆಡಿ ಇದ್ದೇವೆ, ತಾಕತ್ತಿದ್ದರೆ ನೀವು ಚರ್ಚೆಗೆ ರೆಡಿನಾ” ಎಂದು ಅಮಿತ್ ಶಾ ರಾಹುಲ್‍ಗಾಂಧಿಗೆ ಟಾಂಗ್ ನೀಡಿದ್ದಾರೆ.
ಚೀನಾ, ಪಾಕಿಸ್ತಾನ ಗಡಿ ವಿವಾದಗಳು ಬಂದಾಗ ರಾಹುಲ್‍ಗಾಂಧಿ ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ. ಆಳವಾದ ಜ್ಞಾನವಿಲ್ಲದವರು ಮಾತ್ರ ಇಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ. ಭಾರತ ವಿರೋಧಿ ಅಪಪ್ರಚಾರದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಸಮರ್ಥವಾಗಿದೆ. ಆದರೆ, ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶದ ದೊಡ್ಡ ಪಕ್ಷವೊಂದರ ಅಧ್ಯಕ್ಷರಾಗಿದ್ದವರು ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ನೋಡಿದರೆ ನೋವಾಗುತ್ತದೆ ಎಂದು ಶಾ ಬೇಸರ ವ್ಯಕ್ತಪಡಿಸಿದ್ದಾರೆ.
ಎಎನ್‍ಐಗೆ ನೀಡಿದ ಸಂದರ್ಶನ ಮಾಡಿದ ಅಮಿತ್ ಶಾ, `ಮೋದಿ ಶರಣಾಗಿದ್ದಾರೆ’ ಎಂದು ಹ್ಯಾಶ್‍ಟ್ಯಾಗ್ ಹಾಕುವ ಮುನ್ನ ರಾಹುಲ್‍ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ...