ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಂಕ್ರಾಂತಿ ಬಳಿಕ ರಾಜ್ಯಕ್ಕೆ ಅಮಿತ್ ಶಾ; ಜನಸೇವಕ ಸಮಾರೋಪ ಸಮಾವೇಶಕ್ಕೆ ಕರೆಸಲು ಬಿಜೆಪಿ ಪ್ಲ್ಯಾನ್..!

Kariyappa N by Kariyappa N
January 4, 2021
in Newsbeat, Politics, Samagra karnataka, ರಾಜ್ಯ
bjp
Share on FacebookShare on TwitterShare on WhatsappShare on Telegram

ಸಂಪುಟ ವಿಸ್ತರಣೆಗೆ ಶಾ ಕೊಡ್ತಾರಾ ಸಿಗ್ನಲ್..!

ಬೆಂಗಳೂರು: 2019ರ ಲೋಕಸಭೆ ಚುನಾವಣಾ ಪ್ರಚಾರ ಹಾಗೂ ಆಪರೇಷನ್ ಕಮಲದ ಮೂಲಕ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕವೂ ಕರ್ನಾಟಕಕ್ಕೆ ಆಗಮಿಸದ ಬಿಜೆಪಿ ಚಾಣಾಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಕ್ರಾಂತಿ ಬಳಿಕ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಬಿಜೆಪಿ “ಜನಸೇವಕ ಸಮಾವೇಶ” ಹಮ್ಮಿಕೊಂಡಿದ್ದೆ. ಜನವರಿ 11ರಿಂದ 13ರವರೆಗೆ ಸಮಾವೇಶಗಳು ನಡೆಯಲಿದ್ದು, ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ಜನವರಿ 16 ಅಥವಾ 17ರಂದು ನಡೆಯಲಿದೆ.  ಸಮಾರೋಪ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.

Related posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

August 1, 2026
shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

August 1, 2026

ಸಂಪುಟ ವಿಸ್ತರಣೆಗೆ ಶಾ ಕೊಡ್ತಾರಾ ಸಿಗ್ನಲ್..!
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದು ವರ್ಷದಿಂದ ಮುಂದಕ್ಕೆ ಹೋಗುತ್ತಲೇ ಇದೆ. ಸಂಪುಟ ವಿಸ್ತರಣೆಗೆಂದೇ ಸಿಎಂ ಯಡಿಯೂರಪ್ಪ ಪಟ್ಟಿ ಹಿಡಿದುಕೊಂಡು ಎರಡು ಬಾರಿ ದೆಹಲಿಗೆ ಹೋದಾಗಲೂ ಅಮಿತ್ ಶಾ ಸಿಕ್ಕಿರಲಿಲ್ಲ. ಹಲವು ಬಾರಿ ಸಂಪುಟ ವಿಸ್ತರಣೆಗೆ ಬಿಎಸ್‍ವೈ ನಡೆಸುತ್ತಿರುವ ಕಸರತ್ತಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಒಂದು ಕಡೆ, ವಲಸೆ ಬಂದು ಸರ್ಕಾರ ರಚನೆ ಮಾಡಲು ಕಾರಣರಾದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು, ಮತ್ತೊಂದೆಡೆ, ಬಿಜೆಪಿಯಲ್ಲಿರುವ ಅತೃಪ್ತ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒತ್ತಡ ಹೆಚ್ಚಾಗುತ್ತಿದೆ.


ಇದರ ನಡುವೆ, ಬಿ.ಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಬಿಜೆಪಿಯಲ್ಲೇ ನಡೆಯುತ್ತಿರುವ ಬೆಳವಣಿಗೆಗಳ ಭಾಗವಾಗಿಯೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಹೀಗಾಗಿಯೇ ಅಮಿತ್ ಶಾ, ಬಿಎಸ್‍ವೈ ಕೈಗೆ ಸಿಗುತ್ತಿಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ. ಆದರೆ, ಅಮಿತ್ ಶಾ ಸಂಕ್ರಾಂತಿಗೆ ರಾಜ್ಯಕ್ಕೆ ಬರ್ತಾರಾ, ಬೇರೆ ನೆಪ ಹೇಳಿಕೊಂಡು ಬರುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ಜಿಲ್ಲಾ ಪ್ರವಾಸ, ಜನಸೇವಕ ಸಮಾವೇಶ

ನಳಿನ್‍ಕುಮಾರ್ ಕಟೀಲ್, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಪ್ರತಾಪಸಿಂಹ ಒಳಗೊಂಡ ತಂಡವು 11ರಂದು ಮೈಸೂರು, ಚಾಮರಾಜನಗರದದಲ್ಲಿ ಜನಸೇವಕ ಸಮಾವೇಶ ನಡೆಯಲಿದೆ. 12ರಂದು ಹಾಸನ ಮತ್ತು ಮಂಡ್ಯ, 13ರಂದು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಅರವಿಂದ ಲಿಂಬಾವಳಿ, ಈರಣ್ಣ ಕಡಾಡಿ, ಎನ್.ರವಿಕುಮಾರ್ ನೇತೃತ್ವದ ತಂಡ ಜ.11ರಂದು ಚಿಕ್ಕಮಗಳೂರು ಮತ್ತು ಉಡುಪಿ, 12ರಂದು ಮಡಿಕೇರಿ ಮತ್ತು ಮಂಗಳೂರು, 13ರಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾವೇಶ ನಡೆಸಲಿದೆ.
ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ 3ನೇ ತಂಡ, ವಿ.ಸೋಮಣ್ಣ, ರಮೇಶ್ ಜಾರಕಿಹೊಳಿ, ತೇಜಸ್ವ್ವಿನಿ ಅನಂತಕುಮಾರ್ ಅವರ ತಂಡ ಜ.11ರಂದು ಬೆಳಗಾವಿ, ಚಿಕ್ಕೋಡಿ, 12ರಂದು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ, 13ರಂದು ಗದಗ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

bjp
ಜಗದೀಶ ಶೆಟ್ಟರ್ ನೇತೃತ್ವದ ನಾಲ್ಕನೇ ತಂಡದಲ್ಲಿ ಪ್ರಲ್ಹಾದ ಜೋಷಿ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಮಾಲೀಕಯ್ಯ ಗುತ್ತೇದಾರ್ ಇದ್ದು, ಜ.11ರಂದು ಬೀದರ್ ಮತ್ತು ಕಲಬುರ್ಗಿ, 12ರಂದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ, 13ರಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.
ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಇನ್ನೊಂದು ತಂಡದಲ್ಲಿ ಲಕ್ಷ್ಮಣ ಸವದಿ, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ ಇದ್ದು, 11ರಂದು ಹಾವೇರಿ ಮತ್ತು ದಾವಣಗೆರೆ ಜಿಲ್ಲೆ, 12ರಂದು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆ, 13ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾವೇಶ ಏರ್ಪಡಿಸಲಿದೆ ಎಂದು ಬಿಜೆಪಿ ತಿಳಿಸಿದೆ.
ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಪಡಿತರ ಚೀಟಿ ಅನುಷ್ಠಾನ ಆಗಿದೆ. ಒಂದು ದೇಶ ಒಂದೇ ಚುನಾವಣೆ ಕುರಿತ ಚರ್ಚೆ ವ್ಯಾಪಕವಾಗಿ ಆಗಬೇಕು. ಇದರಿಂದ ಸಂಪನ್ಮೂಲದ ಸದ್ಬಳಕೆ ಮತ್ತು ಅಭಿವೃದ್ಧಿ ಕಾರ್ಯ ಇನ್ನಷ್ಟು ವೇಗದಿಂದ ನಡೆಯಲು ಸಾಧ್ಯವಿದೆ. ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಅಗತ್ಯವಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Amit ShahBJPJanasewaka samaveshaKarnataka visitsankranti fest
ShareTweetSendShare
Join us on:

Related Posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

by admin
August 1, 2026
0

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!...

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

by admin
August 1, 2026
0

ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram