ಭಾವನಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್

1 min read
Kalyan jewellers

ಭಾವನಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್

ನಟ ಅಮಿತಾಭ್ ಬಚ್ಚನ್ ಅವರು, ಪತ್ನಿ ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್ ಅವರೊಂದಿಗೆ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ, ಕತ್ರಿನಾ ದಂಪತಿಗಳ ಮಗಳಾಗಿ ನಟಿಸಿದ್ದಾರೆ.
ಎಲ್ಲರೂ ವಿವಾಹ ಸಂಭ್ರಮದಲ್ಲಿ ತೊಡಗಿದ್ದಾರೆ.
Kalyan jewellers

ಅಮಿತಾಬ್ ತನ್ನ ಮಗಳು ಮದುವೆಯಾಗಿ ಮನೆಯಿಂದ ಹೊರಹೋಗುವುದನ್ನು ನೋಡಲಾಗದ ದುಃಖಿತ ತಂದೆಯಾಗಿ ನಟಿಸಿದ್ದಾರೆ. ಅಮಿತಾಬ್ ಮಗಳ ಜೊತೆ ನೃತ್ಯ ಮಾಡುತ್ತಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಕತ್ರಿನಾ ಮದುವೆಯ ದಿನಕ್ಕಾಗಿ ಚಿನ್ನದ ಆಭರಣಗಳಿಂದ ಅಲಂಕೃತಗೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅಮಿತಾಬ್, ಹೊಸ ಒಗ್ಗಟ್ಟಿನ ಶುಭ ಆರಂಭ, ನಂಬಿಕೆ, ಪ್ರೀತಿ ಮತ್ತು ಸಂಪ್ರದಾಯಗಳ ಮೂಲಕ ಗೌರವದಿಂದ ಪೋಷಿಸಲ್ಪಟ್ಟ ಒಂದು ಬಂಧ ..
ಎಲ್ಲರನ್ನೂ ಒಟ್ಟುಗೂಡಿಸುವ ಶುಭ ಕ್ಷಣ ಮುಹರತ್ – ವಧುವನ್ನು ಸಂತೋಷ ಪಡಿಸುವ ವಿವಾಹ ಆಭರಣಗಳ ಸಂಗ್ರಹ ಎಂದು ಬರೆದುಕೊಂಡಿದ್ದಾರೆ.

ಕಲ್ಯಾಣ್ ಜುವೆಲ್ಯರ್ಸ್ ಅವರ ಈ ಜಾಹೀರಾತನ್ನು ಕಳೆದ ವರ್ಷ ಜನವರಿಯಲ್ಲಿ ಚಿತ್ರೀಕರಿಸಲಾಗಿದೆ. ಅಮಿತಾಬ್ ಅವರು ತಮ್ಮ ಬ್ಲಾಗ್‌ನಲ್ಲಿ ಚಿತ್ರೀಕರಣದ ಫೋಟೋಗಳನ್ನು ಹಂಚಿಕೊಂಡಿದ್ದರು.

#Kalyanjewellers #AmitabhBachchan #JayaBachchan #KatrinaKaif

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd