ADVERTISEMENT
Wednesday, September 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೊನಾದ ಭೀತಿಯ ನಡುವೆ ಇಂದು ಅಪ್ಪಳಿಸಲಿದೆ ಅಂಫಾನ್ ಚಂಡಮಾರುತ….

admin by admin
May 20, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸದಿಲ್ಲಿ, ಮೇ 20 : ವಾಯು ಭಾರ ಕುಸಿತದಿಂದ ಬಂಗಾಲ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಂಫಾನ್ ಮಹಾ ಚಂಡಮಾರುತ ಕೊರೊನಾದ ಸಂಕಷ್ಟದ ನಡುವ ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈಗಾಗಲೇ ರಣಭೀಕರ ಸ್ವರೂಪ ಪಡೆದುಕೊಂಡಿರುವ ಅಂಫಾನ್ ಚಂಡಮಾರುತ ಇಂದು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಲಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳದ ದಿಘಾ ಪ್ರಾಂತ್ಯದಲ್ಲಿ ಮಂಗಳವಾರ ಸಂಜೆಯ ಹೊತ್ತಿಗೆ ಮಹಾಮಳೆ ಸುರಿಯಲಾರಂಭಿಸಿದೆ. ಇಷ್ಟರಲ್ಲೇ ಒಡಿಶಾಕ್ಕೂ ಬಂದು ಅಪ್ಪಳಿಸಲಿರುವ ಅಂಫಾನ್ ಚಂಡಮಾರುತ ದಾರಿ ಉದ್ದಕ್ಕೂ ಭಾರೀ ಹಾನಿ ಉಂಟು ಮಾಡುತ್ತಾ ಮುಂದೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಜಗಸ್ತಿಪುರ, ಕೇಂದ್ರಪಾರಾ, ಭದ್ರಕ್, ಜಾಜ್ ಪುರ, ಬಾಲಾಸೋರ್ ಗಳಲ್ಲಿ ಅಂಫಾನ್ ಚಂಡಮಾರುತ ಸಾಕಷ್ಟು ಹಾನಿ ಉಂಟು ಮಾಡಲಿದೆ ಎಂದು ತಜ್ಞರು ಎಚ್ಚರಿಕೆ ‌ನೀಡಿದ್ದಾರೆ.

Related posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

September 9, 2026
LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

September 9, 2026

ಹಾಗಾಗಿ ಆ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದ್ದು, 12 ಲಕ್ಷ ಜನರನ್ನು ‌ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಿಂದ ಸುರಕ್ಷಿತ ಸ್ಥಳಕ್ಕೆ ಮಂಗಳವಾರ ಸಂಜೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಅಯೋಗ (ಎಸ್.ಆರ್.ಸಿ) ದ ಆಯುಕ್ತ ‌ಪಿ.ಕೆ. ಜೆನಾ ತಿಳಿಸಿದ್ದಾರೆ. ಎನ್.ಡಿ. ಆರ್.ಎಫ್ ನ 14 ಮತ್ತು ಒಡಿಶಾ ವಿಪತ್ತು ನಿರ್ವಹಣಾ ಪಡೆ (ಒಡಿಆರ್ ಎಎಫ್) ಯ 20 ತಂಡಗಳು ಅಂಫಾನ್ ‌ಚಂಡಮಾರುತ ತೆರವು ಕಾರ್ಯಾಚರಣೆಯಲ್ಲಿ ನಿರತವಾಗಿದೆ ಎಂದು ಒಡಿಶಾ ಸರಕಾರ ತಿಳಿಸಿದೆ. ಅಷ್ಟೇ ಅಲ್ಲ ‌ಮೇ 21 ರ ವರೆಗೆ ಸಮುದ್ರಕ್ಕೆ ‌ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ‌ನೀಡಲಾಗಿದೆ.

ಈಗಾಗಲೇ ಕೇಂದ್ರ ಸರಕಾರ, ರಾಷ್ಟ್ರೀಯ ‌ವಿಪತ್ತು ನಿರ್ವಹಣ‌ ಪಡೆ ( ಎನ್.ಡಿ.ಆರ್.ಎಫ್) ಯ 41 ತುಕಡಿ, ಸೇನೆ, ನೌಕ‌ಪಡೆ, ವಾಯುಪಡೆ, ಕರಾವಳಿ ಕಾವಲು ಪಡೆಯ ತುಕಡಿಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ‌ರವಾನಿಸಿದೆ. ಕೊರೋನಾ ಸೋಂಕಿನ ‌ಭೀತಿಯಿಂದಾಗಿ‌ ಪಶ್ಚಿಮ ಬಂಗಾಳ ಮತ್ತು ‌ಒಡಿಶಾ ಕರಾವಳಿಯಿಂದ ಸ್ಥಳಾಂತರಿಸಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿರುವ ಲಕ್ಷಾಂತರ ಮಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿ ಕೊಳ್ಳುವ ಅನಿವಾರ್ಯತೆಯೂ ಉಂಟಾಗಿದೆ.
ಇಂದು ‌ಮಧ್ಯಾಹ್ನದ ವೇಳೆಗೆ ಅಂಫಾನ್ ಚಂಡಮಾರುತದ ವೇಗ ಗಂಟೆಗೆ 155 – 166 ಕಿ.ಮೀ.‌ಇರಲಿದ್ದು, ಕ್ರಮೇಣ 185 ಕಿ.‌ಮೀ. ಗಳಿಗೆ ಹೆಚ್ಚಾಗಲಿದೆ. 10ರಿಂದ 15 ಸೆ. ಮೀ. ಗಳಷ್ಟು ಮಳೆ ಸುರಿಯ ಬಹುದು ಮತ್ತು ಹಲವೆಡೆ ಭೂ ಕುಸಿತ ಕೂಡಾ ಉಂಟಾಗ ಬಹುದು ಎಂದು ಅಂದಾಜಿಸಲಾಗಿದೆ.

ಹಿಂದೆ 2019 ರಲ್ಲಿ ‌ಪಶ್ಚಿಮ‌ ಬಂಗಾಳವನ್ನು ಕಂಗೆಡಿಸಿದ ಬುಲ್ ಬುಲ್ ಚಂಡಮಾರುತ ಕ್ಕಿಂತ ಅಂಫಾನ್ ಚಂಡಮಾರುತ ಭೀಕರವಾಗಿ ಇರಲಿದೆ ಎಂದು‌ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಕರಾವಳಿ ಪ್ರದೇಶದ ಜನರನ್ನು ಸ್ಥಳಾಂತರ‌‌ ಕಾರ್ಯಚರಣೆ ‌ನಡೆಸಲಾಗಿದ್ದು, ಎಲ್ಲರಿಗೂ ಮಾಸ್ಕ್ ವಿತರಿಸಿ ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಆಹಾರ, ಔಷಧಿ ನೀರು ಇತ್ಯಾದಿ ವಸ್ತುಗಳ ದಾಸ್ತಾನು ‌ಕೈಗೊಳ್ಳಲಾಗುತ್ತಿದ್ದು, ಜನರ ಸುರಕ್ಷತೆಗೆ ಗಮನ ‌ಕೊಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‌ಮಂಗಳವಾರ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾದ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಂಡಮಾರುತ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.ಈಗಾಗಲೇ ಸುಮಾರು 12‌ ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರಿಗೆ ಶಾಲಾ ಕಾಲೇಜುಗಳಲ್ಲಿ ಆಶ್ರಯ ನೀಡಲಾಗಿದೆ.

Tags: Ampan
ShareTweetSendShare
Join us on:

Related Posts

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

ನೈಸ್ ಸಮರ-ಬೇಕಿದ್ದರೆ ಕೋರ್ಟ್ ಗೆ ಹೋಗಲಿ,ನಮಗೆ ಸಾಮಾನ್ಯ ಪ್ರಜ್ಞೆ ಇದೆ, ಬೇಕಿದ್ದರೆ ಉಪವಾಸ ಮಾಡಲಿ: ದೊಡ್ಡಗೌಡರ ವಿರುದ್ಧ ಗುಡುಗಿದ ಡಿ.ಕೆ. ಶಿವಕುಮಾರ್

by Shwetha
September 9, 2026
0

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಮರ ಸಾರಿದ ಬೆನ್ನಲ್ಲೇ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಷ್ಟೇ...

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

LPG ಗ್ರಾಹಕರಿಗೆ ಕೇಂದ್ರದಿಂದ ಮಹತ್ವದ ಅಪ್‌ಡೇಟ್: ನಗರ–ಗ್ರಾಮೀಣ ಪ್ರದೇಶಗಳಿಗೂ ಇನ್ಮುಂದೆ 25 ದಿನಗಳಲ್ಲೇ ಮರುಬುಕಿಂಗ್

by Shwetha
September 9, 2026
0

ಗೃಹಬಳಕೆಯ LPG ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ಗೃಹ ಬಳಕೆಯ...

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಬಿ. ದಯಾನಂದ್‌ಗೆ ಮತ್ತೆ ಬಡ್ತಿ; ISD ಡಿಜಿಪಿಯಾಗಿ ನೇಮಕ

by Shwetha
September 9, 2026
0

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2025ರಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಬಡ್ತಿಯನ್ನು ರಾಜ್ಯ ಸರ್ಕಾರ ಇದೀಗ ಮರುಸ್ಥಾಪಿಸಿದೆ....

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ

by Shwetha
September 9, 2026
0

ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ...

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

ಲವ್ ಜಿಹಾದ್ ಕಳಂಕ ಅಳಿಸಿ ಒಂದಾದ ಎರಡು ಕುಟುಂಬಗಳು: ಮುಸ್ಲಿಂ ಯೂಟ್ಯೂಬರ್ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಗುವಿನ ತೊಟ್ಟಿಲು ಶಾಸ್ತ್ರ

by Shwetha
September 9, 2026
0

ಧಾರವಾಡ: ಪ್ರೀತಿಗೆ ಜಾತಿ ಧರ್ಮದ ಹಂಗಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ಲವ್ ಜಿಹಾದ್ ಆರೋಪ ಮತ್ತು ತೀವ್ರ ವಿರೋಧ ಎದುರಿಸುತ್ತಿದ್ದ ಉತ್ತರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram