ಅಮುಲ್ ಡೈರಿ ಹಾಲಿನ ಬೆಲೆ ಲೀಟರ್ ಗೆ 3 ರೂ ಹೆಚ್ಚಳ….
ಗುಜರಾತ್ ಡೈರಿ ಸಹಕಾರಿ ಅಮುಲ್ ಇಂದಿನಿಂದ ಜಾರಿಗೆ ಬರುವಂತೆ ತಾಜಾ ಹಾಲಿನ ಮೇಲೆ ಲೀಟರ್ ಗೆ 3 ರೂ. ಈ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ದರ ಪರಿಷ್ಕರಣೆಯ ನಂತರ ಅಮುಲ್ ಗೋಲ್ಡ್ ಬೆಲೆ ಲೀಟರ್ಗೆ 66 ರೂ. ಅಮುಲ್ ತಾಜಾ ಲೀಟರ್ ಗೆ 54 ರೂ. ಅಮುಲ್ ಹಸುವಿನ ಹಾಲು ಲೀಟರ್ಗೆ 56 ರೂ. ಮತ್ತು ಅಮುಲ್ ಎ2 ಎಮ್ಮೆಯ ಹಾಲಿಗೆ ಈಗ ಲೀಟರ್ಗೆ 70 ರೂ.ಗಳಾಗಲಿದೆ ಎಂದು ಅಮುಲ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ತನ್ನ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ನಲ್ಲಿ ಮಾರಾಟ ಮಾಡುತ್ತಿದೆ, ಅಕ್ಟೋಬರ್ನಲ್ಲಿ ತನ್ನ ಗೋಲ್ಡ್, ತಾಜಾ ಮತ್ತು ಶಕ್ತಿ ಹಾಲಿನ ಬ್ರಾಂಡ್ಗಳ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂ ಹೆಚ್ಚಿಸಿತ್ತು.
“ಫೆಬ್ರವರಿ 3 ರಿಂದ ಜಾರಿಗೆ ಬರುವಂತೆ ಅಮುಲ್ ಹಾಲಿನ ಎಲ್ಲಾ ರೂಪಾಂತರಗಳು ಬೆಲೆಯನ್ನು ಪರಿಷ್ಕರಿಸಿರುವುದನ್ನ ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಮಾರ್ಕೆಟಿಂಗ್ ಫೆಡರೇಶನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ದನಗಳ ಮೇವಿನ ವೆಚ್ಚವೇ ಸರಿಸುಮಾರು 20 ಪ್ರತಿಶತಕ್ಕೆ ಏರಿದೆ ಎಂದು ಅಮುಲ್ ಹೇಳಿಕೆ ನೀಡಿದೆ.
Amul hikes milk price: Amul dairy milk price increased by Rs 3 per liter….