AMUL | ಸಾರ್ವಜನಿಕರಿಗೆ ಅಮುಲ್ ಬಿಗ್ ಶಾಕ್
ನವದೆಹಲಿ : ಸಾರ್ವಜನಿಕರಿಗೆ ಅಮುಲ್ ಬಿಗ್ ಶಾಕ್ ನೀಡಿದೆ. ಮಾರ್ಚ್ ಒಂದರಿಂದ ಅಮುಲ್ ಹಾಲು ದುಬಾರಿಯಾಗಲಿದೆ.
ಹೌದು..!! ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿರುವ ಬೆನ್ನಲ್ಲೆ ಹಾಲಿನ ಬೆಲೆಯೂ ಹೆಚ್ಚಾಗಲಿದೆ.
ಮಾರ್ಚ್ ರಿಂದ ಪ್ರತಿ ಲೀಟರ್ ಹಾಲಿನ ಮೇಲೆ 2 ರೂಪಾಯಿಗಳನ್ನ ಹೆಚ್ಚಿಸಲು ಅಮುಲ್ ನಿರ್ಧಾರ ಮಾಡಿದೆ.
ಈ ಬೆಲೆ ಹೆಚ್ಚಳದೊಂದಿಗೆ ಅಮುಲ್ ನ ಅರ್ಧ ಲೀಟರ್ ಗೋಲ್ಡ್ ಹಾಲಿನ ಬೆಲೆ 30 ರುಪಾಯಿ ಆಗಲಿದೆ.
ಇನ್ನು ಅಮುಲ್ ತಾಜಾ 24 ರೂ.ಗೆ ಅರ್ಧ ಲೀಟರ್ ಮತ್ತು ಅಮುಲ್ ಶಕ್ತಿ 27 ರೂ. ಆಗಲಿದೆ.
ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಬೆಲೆಗಳನ್ನ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಮುಲ್ ತಿಳಿಸಿದೆ. ಈ ಹೊಸ ಬೆಲೆ ನಾಳೆಯಿಂದಲೇ ಜಾರಿಯಾಗಲಿದೆ. AMUL increases the price of milk by Rs 2