8 ವರ್ಷದ ಬಾಲಕಿಯ ತಲೆ ಕಡಿದ ಆರೋಪಿ
ಓಡಿಸ್ಸಾ: ವ್ಯಕ್ತಿಯೋರ್ವ 8 ವರ್ಷದ ಬಾಲಕಿಯ ರುಂಡ ಕಡಿದು, ರುಂಡದೊಂಗೆ ಗ್ರಾಮದೆಲ್ಲಡೆ ತಿರುಗಾಡಿದ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯ, ಮಾನಕಿರಾ ಮಂಡಲದ ಗ್ರಾಮದಲ್ಲಿ ನಡೆದಿದೆ.
8 ವರ್ಷದ ಬಾಲಕಿ ಮೃತದುರ್ದೈವಿ. 30 ವರ್ಷದ ವ್ಯಕ್ತಿ ಕೊಲೆ ಆರೋಪಿ. ಜಮಾನಕಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಿಗ್ಗೆ ಬಾಲಕಿ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ನಿಂತಿದ್ದನು. ಆಕೆ ನೋಡಿದವನೆ ಆಕೆಯ ಹತ್ತಿರಕ್ಕೆ ಬಂದು ತಲೆ ಕಡಿದು ಕೊಡಲಿಯಿಂದ ಕತ್ತರಿಸಿಬಿಟ್ಟಿದ್ದಾನೆ. ನಂತರ ತುಂಡರಿಸಿದ ತಲೆಯನ್ನು ಹೊತ್ತು ಊರೆಲ್ಲ ಸುತ್ತಿದ್ದಾನೆ.
ಆರೋಪಿ ಪತ್ನಿ ಕೈಯಲ್ಲಿ ತುಂಡರಿಸಿದ ತಲೆಯನ್ನು ಕಂಡಾಗ ಆತನೊಂದಿಗೆ ಜಗಳವಾಡಿದ್ದಾಳೆ. ಆದರೆ ಅವನು ಕೊಡಲಿಯಿಂದ ಹೆಂಡತಿಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಆರೋಪಿ ಅಲ್ಲೇ ನೆಲದ ಮೇಲೆ ಮಲಗಿ ನಿದ್ದೆಗೆ ಜಾರಿದ್ದಾನೆ.
ಬಳಿಕ ವಿಷಯ ಪೊಲೀಸರಿಗೆ ತಿಳಿದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆತ ಮಾದಕ ವ್ಯಸನಿ, ಆದರೆ ಬುದ್ಧಿ ಮಾಂದ್ಯನಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಪರಾಧವನ್ನು ಮಾಡುವಾಗ ಅವನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಖಚಿತವಾಗಿಲ್ಲ. ಆದರೆ ಈತನಿಗೆ ಮತ್ತು ಕೊಲೆಯಾದ ಬಾಲಕಿ ಕುಟುಂಬಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು.
ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಮಾನಕಿರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರೇಮ್‍ಜಿತ್ ದಾಸ್ ತಿಳಿಸಿದ್ದಾರೆ.