ಒಂದು ಲೇಖನ, ಬಾಲಗಂಗಾಧರ ತಿಲಕರ ಪ್ರೇರಣೆಯಿಂದ ಶುರುವಾಯ್ತು ಗೋದ್ರೆಜ್ ಕಂಪನಿ !!
ನಿಮಗೆಲ್ಲ 2014ರ ಸೆಪ್ಟೆಂಬರ್ 24ನೇ ತಾರೀಕು ನೆನಪಿರಬೇಕು. ಅಂದು ಭಾರತ ಜಗತ್ತಿನ ಯಾವ ದೇಶವೂ ಮಾಡದ ಅತಿದೊಡ್ಡ ಸಾಧನೆ ಮಾಡಿತು. ಅದು ಮಂಗಳಯಾನ. ಭಾರತ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿತು. ಅರೆ ಈಗ ಯಾಕೆ ಈ ಮಂಗಳಯಾನ ವಿಷಯ ಅಂತಿರಾ ಕಾರಣ ಇದೆ.
ಈ ಮಂಗಳಯಾನ ಯಶಸ್ಸಿನ ಹಿಂದೆ ಸ್ವದೇಶಿ ಕಂಪನಿಯ ಕಾಣದ ಕೈ ಇದೆ. ಅದು ಗೋದ್ರೆಜ್…
ಗೋದ್ರೆಜ್ ಹೆಸರು ನಿಮಗೆ ಚಿರಪರಿಚಿತವೆ. ಪ್ರತಿದಿನ ನೀವು ಈ ಹೆಸರಿನ ವಸ್ತುವನ್ನು ಬಳಸದೆ ಇರಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಸಮಯದಲ್ಲಿ ಬಳಸೇ ಬಳಸಿರುತ್ತಿರಿ. ಇದೇನು ಮಂಗಳಯಾನ, ಗೋದ್ರೆಜ್ ಕಂಪನಿಗು ಏನು ಸಂಬಂಧ ಅಂತಿರಾ? ಇಲ್ಲಿದೆ ಇಂಟ್ರಸ್ಟಿಂಗ್ ಸಂಗತಿ.
ಭಾರತದ ಯಶಸ್ವಿ ಮಂಗಳಯಾನದ ಇಂಜಿನ್, ಲಾಂಚ್ವೆಹಿಕಲ್ ಮತ್ತು ಆರ್ಬಿಟರ್ ಅನ್ನು ಇಸ್ರೋದೊಂದಿಗೆ ಜಂಟಿಯಾಗಿ ಗೋದ್ರೆಜ್ ಏರೋಸ್ಪೇಸ್ ಕಂಪನಿ ತಯಾರಿಸಿದ್ದು ಹಮ್ಮೆಯ ಸಂಗತಿ. ಹಾಗಿದ್ದರೆ ಈ ಕಂಪನಿಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋದು ಬೇಡವೇ? ಬಿನ್ನಿ ನಮ್ಮ ದೇಶದಲ್ಲೇ ಹುಟ್ಟಿದ ಗೋದ್ರೆಜ್ ಕಂಪನಿ ಬಗ್ಗೆ ಕೆಲವು ಇಂಟ್ರಸ್ಟಿಂಗ್ ಸಂಗತಿಗಳನ್ನು ತಿಳಿದುಕೊಳ್ಳೋಣ.
18ನೇ ಶತಮಾನದಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ವಕೀಲರಾದ ಅರ್ದೇಶಿರ್ ಗೋದ್ರೆಜ್ (Ardeshir Godrej) ಹೆಸರು ಕೇಳಿರುವವರಲ್ಲಿ ವಿರಾಳತಿ ವಿರಳ ಜನ. ಆದರೆ ಕೊನೆಯ ಗೋದ್ರೆಜ್ ಎಂಬ ಶಬ್ದವನ್ನು ಎಲ್ಲರು ಕೇಳಿರುತ್ತಾರೆ. ಬೀಗ ಮತ್ತು ಬೀಗದ ಕೈಗಳಿಗೆ ಬ್ರ್ಯಾಂಡ್ ಆಗಿರುವ ಗೋದ್ರೆಜ್ ಕಂಪನಿಯ ಸ್ಥಾಪಕರು ಅರ್ದೇಶಿರ್ ಗೋದ್ರೆಜ್. ಇವರ ವೃತ್ತಿ ವಕೀಲಕಿ. ಮುಂದೆ ಇವರು ವಕೀಲಕಿ ವೃತ್ತಿ ತೊರೆಯುತ್ತಾರೆ. ನಂತರ ಸ್ವಂತ ಉದ್ಯೋಗ ಮಾಡಬೇಕು ಎಂದುಕೊಂಡರು. ಈ ಸಂಬಂಧ ಪರಿಚಿತರಿಂದ 300 ರೂ. ಸಾಲ ಪಡೆದು ಶಸ್ತ್ರ ಚಿಕಿತ್ಸೆಗೆ ಬೇಕಾದ ವಸ್ತುಗಳನ್ನು ತಯಾರು ಮಾಡಿದರು. ಆದರೆ ಇದರಲ್ಲಿ ಅವರು ಲಾಭ ಕಾಣಲಿಲ್ಲ. ನಂತರ ಒಂದು ಔಷಧ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದರೂ ಮನಸ್ಸಿಗೆ ತೃಪ್ತಿಕೊಡಲಿಲ್ಲ.
ಇವರ ಪ್ರಸಿದ್ಧ ಒಂದು ಸಾಲು ಇದೆ. ಅದು “ಸೋಲುಗಳಿಂದಲೇ ಗೆಲುವಿನ ಯಶಸ್ಸು ಕಾಣಲು ಸಾಧ್ಯ” ಎಂದು.
ಒಂದು ದಿನ ಇವರು ಒಂದು ಪ್ರತಿಕೆಯಲ್ಲಿ ಮುಂಬೈನ ಪೊಲೀಸ್ ಕಮಿಷನರ್ ಅವರು ಬರೆದಂತಹ ಲೇಖನ ಓದುತ್ತಾರೆ. ಆ ಲೇಖನದಲ್ಲಿ ಬೀಗ ಮತ್ತು ಬೀಗದ ಕೈ ಅವಶ್ಯಕತೆ ಬಗ್ಗೆ ತಿಳಿಸಿರುತ್ತಾರೆ. ಈ ಕುರಿತು ವಿಚಾರ ಮಾಡಿ ಬೀಗ ಮತ್ತು ಬೀಗದ ಕೈಯನ್ನು ತಯಾರಿಸಲು ಮುಂದಾಗುತ್ತಾರೆ. ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ 1897ರಲ್ಲಿ ತಮ್ಮ 29ನೇ ವರ್ಷದಲ್ಲಿ ಬೀಗ ಮತ್ತು ಬೀಗದ ಕೈಗಳನ್ನು ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಧಿಕ ಲಾಭಗಳಿಸುತ್ತಾರೆ.
ಇದರಿಂದ ಉತ್ತೇಜನಗೊಂಡು ಅನೇಕ ವಿವಿಧ ಉತ್ಪನ್ನಗಳನ್ನು ತಯಾರು ಮಾಡಲು ಆರಂಭಿಸುತ್ತಾರೆ. ಒಂದು ಅಂಕಿ-ಅಂಶದ ಪ್ರಕಾರ ಜಗತ್ತಿನ 60 ಮಿಲಿಯನ್ ಜನರು ಪ್ರತಿದಿನ ಒಂದಲ್ಲಾ ಒಂದು ಗೋದ್ರೆಜ್ ಕಂಪನಿಯ ವಸ್ತುವನ್ನು ಬಳಸುತ್ತಾರೆ. ಗೋದ್ರೆಜ್ ಗ್ರೂಪ್ ಕಂಪನಿ ದೇಶದಲ್ಲಿ 2500-3500 ಎಕರೆ ಅತ್ಯಂತ ದುಬಾರಿ ಬೆಲೆ ಬಾಳುವ ಜಾಗವನ್ನು ಹೊಂದಿದೆ.
ಭಾರತದಲ್ಲಿ ಹುಟ್ಟಿದ ಈ ಗೋದ್ರೆಜ್ ಕಂಪನಿ ಯಾವ ಯಾವ ದೇಶದಲ್ಲಿ ತನ್ನ ಛಾಪು ಮೂಡಿಸಿದೆ. ಬಿನ್ನಿ ಜಗತ್ತನ್ನು ಒಂದು ಸುತ್ತು ಹಾಕಿಕೊಂಡು ಬರೋಣ. ಉತ್ತರ ಅಮೆರಿಕಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹೇರ್ ಆಯಿಲ್ ಸ್ಟ್ರೆಂತ್ ಆ್ಯಂಡ್ ನೇಚರ್ ಇದನ್ನು ಈ ಕಂಪನಿಯೇ ತಯಾರಿಸುತ್ತದೆ. ಹಾಗೆ ಅಮೆರಿಕಾದ ಪ್ರಸಿದ್ಧ ಏರಲೈನ್ಸ್ “ಬೋಯ್” ಈ ವಿಮಾನಕ್ಕೆ ತಯಾರಿಕಾ ಸಮಾಗ್ರಿಗಳನ್ನು ಕೂಡಾ ಒದಗಿಸುವುದು ಗೋದ್ರೆಜ್.
ದಕ್ಷಿಣ ಅಮೆರಿಕದಲ್ಲಿ ಪ್ರಸಿದ್ಧಿಯಾದ ಹೇರ್ ಆಯಿಲ್ ಎಲಿಸಿಟ್, ಪೆಮೆಲಾ ಗ್ರಾಂಟ್ ಮತ್ತು ಅರ್ಜೆಂಟಾನಾದ ಹೇರ್ ಕಲರ್ ಪ್ರಾಡಕ್ಟ್ “issue” ಹೇರ್ ಸ್ಪೆರ್ಪೆ “ರೊಬಿ” ಮತ್ತು ಇನ್ನಿತರ ಪ್ರಾಡಕ್ಟ್ಗಳಾದ 919, ಸನ್ ಸ್ಕ್ರೀನ್ ವಿಲ್ಲೆನ್ಯೂವ್ ಅನ್ನು ಇದೇ ಕಂಪನಿ ತಯಾರಿಸುತ್ತದೆ. ಆಫ್ರಿಕಾದಲ್ಲಿ ಹೇರ್ ಆಯಿಲ್ ಅನೆಕ್ಟೋ, ನೈಜೇರಿಯಾದ ಅತ್ಯಂತ ಹಳೆಯದಾದ ತುರಾ ಸೋಪ್, ಉಮಾಂಗನ ಸೋಹಾರ ದೇಶದಲ್ಲಿ ಫರ್ನಿಚರ್ ಮತ್ತು ಏಷ್ಯಾದಲ್ಲೇ ಎರಡನೇ ಅತಿ ಹೆಚ್ಚು ಮಾರಾಟವಾಗುವ ಎರಡನೇ ಪ್ರಾಡಕ್ಟ್ ಎನಿಸಿಕೊಂಡಿರುವ ಮೊಸ್ಕಿಟೊ ಲಿಕ್ವಿಡ್ ಅನ್ನು ಗೋದ್ರೇಜ್ ಉತ್ಪಾದಿಸುತ್ತದೆ.
ಇಂಡೋನೇಷ್ಯಾದಲ್ಲಿ ಹಿಟ್, ಕ್ಯಾಪ್ಕಾಜಾ, ಸ್ಟೆಲ್ಲಾ, ಕೆರೆರಾ ಮತ್ತು ಬೇಬಿ ಕೇರ್ ಆದ ಮಿಟು ಪ್ರಾಡೆಕ್ಟ್ಗಳು ಗೋದ್ರೆಜ್ ಕಂಪನಿಯದ್ದಾಗಿವೆ. ಇನ್ನು ಗೋದ್ರೆಜ್ ಕಂಪನಿ ಬಾಂಗ್ಲಾದೇಶ್ನಲ್ಲಿ ಹಸು ಸಾಕಾಣಿಕೆ, ಕೋಳಿ ಸಾಕಾಣಿಕೆಯ ಅತಿದೊಡ್ಡ ಫಾರ್ಮ್ಹೌಸ್ ಹೊಂದಿದೆ. ಶ್ರೀಲಂಕಾದಲ್ಲಿ ಕೂದಲಿಗೆ ಬಣ್ಣ ಹಚ್ಚಲು ಆಭಾ ಎಂಬ ಪ್ರಾಡೆಕ್ಟ್ ಉತ್ಪಾದಿಸುತ್ತದೆ. ಹೀಗೆ ನಾನಾ ದೇಶದಲ್ಲಿ ತನ್ನ ಕೈಯನ್ನು ಚಾಚಿರುವ ಗೋದ್ರೆಜ್ ಭಾರತದಲ್ಲಿ ಕಡಿಮೆ ಪ್ರಾಡೇಕ್ಟ್ಗಳನ್ನೇನು ಉಪ್ಪಾದನೆ ಮಾಡುವುದಿಲ್ಲ.
ಇಲ್ಲಿಯೂ ಕೂಡ ಈ ಕಂಪನಿಯ ಪ್ರಾಡೆಕ್ಟ್ಗಳ ಪಟ್ಟಿ ದೊಡ್ಡದಾಗಿದೆ. ನೀವು ಪ್ರತಿದಿನ ಗೋದ್ರೆಜ್ ಕಂಪನಿಯ ವಸ್ತುಗಳನ್ನು ಬಳಸೇ ಬಳಸುತ್ತಿರಿ. ನಮ್ಮ ದೇಶದಲ್ಲಿ ಕೂದಲಿಗೆ ಬಣ್ಣ ಹಚ್ಚಲು ಗೋದ್ರೆಜ್ ಎಂದು ಮೂಲ ಹೆಸರಿನ ಲಿಕ್ವಿಡ್ ಇದೆ. Hit, ಸಿಂತೋಲ್, ಫರ್ನಿಚರ್, ಕಪಾಟು, ಏರ್ ಕೂಲರ್, ಬ್ಯಾಟರಿ, ಸಿಸಿಟಿವಿ ಕ್ಯಾಮೆರಾ ಹೀಗೆ ಅನೇಕ ವಸ್ತಗಳನ್ನು ತಯಾರಿಸುತ್ತಿದೆ.
ಹೀಗೆ 125 ವರ್ಷಗಳ ಇತಿಹಾಸ ಹೊಂದಿರುವ ಗೋದ್ರೆಜ್ನ ಕಂಪನಿ ದಾನ-ಧರ್ಮದಲ್ಲಿ ಏನು ಕಡಿಮೆ ಇಲ್ಲ. ತನಗೆ ಬಂದ ಲಾಭದಲ್ಲಿ ಶೇ 23 ರಷ್ಟು ಹಣದಲ್ಲಿ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದೆ. ಹಾಗೆ ಶಾಲೆ, ಆಸ್ಪತ್ರೆಗಳಿಗೆ ದಾನ ಮಾಡುತ್ತದೆ. ಬಡಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತಿದೆ.
ಈ ಎಲ್ಲ ಸಾಧನೆ ಹಿಂದೆ ಮತ್ತು ಸ್ವದೇಶಿ ಉತ್ಪನ್ನದ ಹುಚ್ಚಿನ ಹಿಂದೆ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಪ್ರೇರಣೆ ಇದೆ. ಹೌದು ಒಮ್ಮೆ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಅರ್ದೇಶಿರ್ ಗೋದ್ರೆಜ್ ಅವರು ಭೇಟಿಯಾದಾಗ ತಿಲಕರು, ಅರ್ದೇಶಿರ್ ಗೋದ್ರೆಜ್ ಅವರಲ್ಲಿ ಸ್ವದೇಶಿ ಚಿಂತನೆಯನ್ನು ಬಿತ್ತಿದರು. ಇದನ್ನು ಮೈಗೂಡಿಸಿಕೊಂಡ ಅರ್ದೇಶಿರ್ ಗೋದ್ರೆಜ್ ಅವರು ನಮ್ಮ ದೇಶದಲ್ಲೇ ಉತ್ಪಾದನೆ ಆರಂಭಿಸಬೇಕು ಅದರ ಮೇಲೆ MADE IN INDIA ಎಂಬ ಅಂಕಿತ ಇರಬೇಕು ಎಂಬ ಛಲತೊಟ್ಟು ಗ್ರೋದ್ರೆಜ್ ಕಂಪನಿ ಆರಂಭಿಸಿದರು.








