ಅಫ್ಘಾನಿಸ್ಥಾನದಲ್ಲಿ ಪ್ರಬಲ ಭೂಕಂಪ – 250 ಕ್ಕೂ ಹೆಚ್ಚು ಮಂದಿ ಸಾವು….

1 min read

ಅಫ್ಘಾನಿಸ್ಥಾನದಲ್ಲಿ ಪ್ರಬಲ ಭೂಕಂಪ – 250 ಕ್ಕೂ ಹೆಚ್ಚು ಮಂದಿ ಸಾವು….

ಅಫ್ಘಾನಿಸ್ತಾನದಲ್ಲಿ ಬುಧವಾರ ಸಂಭವಿಸಿದ ಭೂಕಂಪದಿಂದ ಭೂಮಿ ತತ್ತರಿಸಿದ್ದು, ಕನಿಷ್ಠ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ ತಿಳಿಸಿದೆ.

6.1 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು  ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ. ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಸಾವು ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಯುಎಸ್ ಜಿಯಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಖೋಸ್ಟ್ ನಗರದಿಂದ ಸುಮಾರು 44 ಕಿ.ಮೀ ದೂರದಲ್ಲಿದೆ ಮತ್ತು 51 ಕಿ.ಮೀ ಆಳದಲ್ಲಿದೆ. ಈ ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದರೆ ನೆರೆಯ ಪಾಕಿಸ್ತಾನದ ಲಾಹೋರ್, ಮುಲ್ತಾನ್, ಕ್ವೆಟ್ಟಾದಲ್ಲೂ ಭೂಮಿ ಕಂಪಿಸಿದೆ. ಇದಲ್ಲದೇ ಭಾರತದಲ್ಲೂ ಕಂಪನದ ಅನುಭವವಾಗಿರುವ ಬಗ್ಗೆ ವರದಿಯಾಗಿದೆ.

ಪಾಕಿಸ್ತಾನದಲ್ಲಿ ಭೂಕಂಪ

ಮಂಗಳವಾರ ರಾತ್ರಿ ಪಾಕಿಸ್ತಾನದಲ್ಲೂ ಭೂಕಂಪನದ ಅನುಭವವಾಗಿದೆ.  ಇಲ್ಲಿ ಮಧ್ಯಾಹ್ನ 2.24ಕ್ಕೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿದ ವರದಿಯಾಗಿಲ್ಲ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd