ಲೈಂಗಿಕ ಕಾರ್ಯಕರ್ತೆಯನ್ನು 140 ಬಾರಿ ಇರಿದು ಕೊಲೆ ಮಾಡಿದ್ದ 30 ವರ್ಷ ಹಳೆಯ ಲಂಡನ್ ಲಂಡನ್ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆಯಾಗಿದೆ.
ಈ ಪ್ರಕರಣದಲ್ಲಿ ಸಂದೀಪ್ ಪಟೇಲ್(51)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಯು ತನ್ನದೊಂದು ತಲೆ ಕೂದಲಿನ ಎಳೆಯಿಂದಾಗಿ ಸಿಕ್ಕಿ ಬಿದ್ದಿದ್ದಾನೆ. 1994 ರಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಪ್ರದೇಶದಲ್ಲಿದ ಫ್ಲಾಟ್‌ವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಮರೀನಾ ಕೊಪ್ಪೆಲ್(39) ಳನ್ನು 140 ಬಾರಿ ಇರಿದು ಕೊಲೆ ಮಾಡಿದ್ದ. ನಂತರ ಯಾವುದೇ ಸಾಕ್ಷಿ ಸಿಗದಂತೆ ಮಾಡಿ ಪಾರಾಗಿದ್ದ.
ಕೊಪ್ಪೆಲ್ ಹತ್ಯೆಯಾಗಿರುವ ಫ್ಲಾಟ್‌ನಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಪಟೇಲ್ನ ಬೆರಳಚ್ಚು ಪತ್ತೆಯಾದರೂ ಪ್ರಕರಣ ಭೇದಿಸಲು ಸಾಧ್ಯವಾಗಲಿಲ್ಲ. ಸದ್ಯ ಕೊಪ್ಪೆಲ್ ಧರಿಸಿದ್ದ ಉಂಗುರದಲ್ಲಿ ಸಿಲುಕಿಕೊಂಡಿದ್ದ ತಲೆಕೂದಲಿನ ಎಳೆಯಿಂದಾಗಿ 1994ರಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಬೈಲೇ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ತಲೆಕೂದಲಿನ ಎಳೆಯನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದಾಗ ಸಂದೀಪ್ ಪಟೇಲ್‌ದ್ದು ಎಂಬುವುದು ತಿಳಿದು ಬಂದಿದೆ. ರಕ್ತಸಿಕ್ತ ಹೆಜ್ಜೆಗುರುತು ಪಟೇಲ್‌ಗೆ ಹೊಂದಿಕೆಯಾಗಿದೆ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ. ಅಲ್ಲದೇ, ಮಹಿಳೆಯ ಬ್ಯಾಂಕ್ ಕಾರ್ಡ್ ನ್ನು ಕೂಡ ಆತ ಬಳಸಿದ್ದ ಎನ್ನಲಾಗಿದೆ.








