National news – ದಿ ಗ್ರೇಟ್ ಖಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ…
ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ನ ಸ್ಟಾರ್ ಆಟಗಾರ ಎಂದೆ ಗುರುತಿಸಿಕೊಂಡಿರುವ ದಲಿಪ್ ಸಿಂಗ್ ರಾಣಾ ಆಲಿಯಾಸ್ ದಿ ಗ್ರೇಟ್ ಖಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ..
ವೃತ್ತಿಪರ ಕುಸ್ತಿಪಟು ಮತ್ತು wwe ನ ಸ್ಟಾರ್ ಆಟಗಾರ ಖಲಿ ಇಂದು ಮುಂಜಾನೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯನ್ನ ತಲುಪಿದ್ದಾರೆ. 1 ಗಂಟೆಗೆ ಆಯೋಜಿಸಿದ್ದ ಪಕ್ಷ ಸೇರ್ಪಡೇ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಖಲಿ ಅವರನ್ನ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಲಾಗಿದೆ. An inspiration to youth’: Former WWE star The Great Khali joins BJP
“ದಿ ಗ್ರೇಟ್ ಖಲಿ ನಮ್ಮೊಂದಿಗೆ ಸೇರ್ಪಡೆಗೊಳ್ಳುವ ಮೂಲಕ ಇದು ಯುವಕರಿಗೆ ಮತ್ತು ದೇಶದ ಇತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ” ಎಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಧಿರೈನಾ ಎಂಬ ಸಣ್ಣ ಹಳ್ಳಿಯಿಂದ ಬಂದ ಖಲಿ WWE ನಿಂದ ನಿವೃತ್ತರಾದ ನಂತರ, ಭಾರತೀಯ ವೃತ್ತಿಪರ ಕುಸ್ತಿ ಪ್ರಚಾರ ಮತ್ತು ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ತರಬೇತಿ ಅಕಾಡೆಮಿಯನ್ನ ನಡೆಸುತ್ತಿದ್ದಾರೆ.








