ಬೆಂಗಳೂರು: ಕೈಯಲ್ಲಿ ಖಡ್ಗ ಹಿಡಿದು ರಾಣಿಯಂತೆ ಐಪಿಎಸ್ ಅಧಿಕಾರಿ ಡಿ. ರೂಪಾ (IPS Officer Roopa) ಫೋಸು ಕೊಟ್ಟಿದ್ದಾರೆ.
ಪೊಲೀಸ್ ಅಧಿಕಾರಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಸರಾ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದಾಗ ಖಡಕ್ ಅಧಿಕಾರಿ ಕೂಡ ಲಾಠಿ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದು ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಖಡ್ಗ ಹಿಡಿದು, ಕೆಂಪು ಸೀರೆ, ಹಸಿರು ಬಣ್ಣದ ಬ್ಲೌಸ್ ತೊಟ್ಟು, ಮೈತುಂಬಾ ಆಭರಣ ಹಾಕಿಕೊಂಡಿದ್ದಾರೆ. ಅಲ್ಲದೇ, ಸಿಂಹಾಸನದಲ್ಲಿ ಥೇಟ್ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಹೆಣ್ಣು ನಾಲ್ಕು ಗೋಡೆಯೊಳಗೆ ಬಂಧಿಯಲ್ಲ, ಆಕೆಯೊಳಗೊಂದು ಶಕ್ತಿ ಇದೆ. ಸಮಾಜದಲ್ಲಿ ಸವಾಲುಗಳನ್ನು ಎದುರಿಸಿ ನಿಲ್ಲುವುದರ ಜೊತೆಗೆ ಯಾವುದೇ ಕ್ಷೇತ್ರದಲ್ಲಿಯೂ ತಾನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬುವುದಕ್ಕೆ ಡಿ. ರೂಪಾ ಉತ್ತಮ ಉದಾಹರಣೆ ಎಂದು ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಭಾರ್ಗವಿ ಕೆ.ಆರ್. ಎಂಬುವವರು ಬರೆದುಕೊಂಡಿದ್ದಾರೆ.