ಸಿಂಹಕ್ಕೆ – ಹುಲಿಗೆ ಹುಟ್ಟಿದ್ದಾನೆ: ಲೈಗರ್ ಚಿತ್ರದ ಟ್ರೈಲರ್ ರಿಲೀಸ್ ….
ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್ ಯಂಗ್ ಬ್ಯೂಟಿ ಅನನ್ಯಾ ಪಾಂಡೆ ನಾಯಕಿಯಾಗಿರುವ ಈ ಚಿತ್ರವನ್ನ ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ.
ಕಿಕ್ ಬಾಕ್ಸಿಂಗ್ ಕುರಿತು ಬರುತ್ತಿರುಯವ ಚಿತ್ರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಆಗಸ್ಟ್ 25 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಪ್ರಚಾರಾರ್ಥವಾಗಿ ಟ್ರೇಲರ್ ಬಿಡುಗಡೆಯಾಗಿದೆ.
ಸಿಂಹಕ್ಕೆ ಹುಲಿಗೆ ಹುಟ್ಟಿದ್ದಾನೆ, ..ಕ್ರಾಸ್ ಬ್ರೀಡ್ ಸರ್ ನನ್ನ ಮಗ ಎಂಬ ನಟಿ ರಮ್ಯಾಕೃಷ್ಣ ಅವರ ಡೈಲಾಗ್ ನೊಂದಿಗೆ ಟ್ರೈಲರ್ ಶುರುವಾಗುತ್ತದೆ. ಪುರಿ ನಿರ್ದೇಶನದ ಮಾಸ್ ಎಂಟರ್ಟೈನರ್ ಸಿನಿಮಾ ಎಂಬುದು ನೋಡಿದ ತಕ್ಷಣ ತಿಳಿಯುತ್ತದೆ. ಒಬ್ಬ ಸಾಮಾನ್ಯ ಯುವಕ ರಾಷ್ಟ್ರಮಟ್ಟದಲ್ಲಿ ಬಾಕ್ಸರ್ ಆಗಿ ಬೆಳೆದದ್ದು ಹೇಗೆ ಎಂಬ ಕುತೂಹಲಕಾರಿ ಕಥೆಯನ್ನು ಸಿನಿಮಾ ತೋರಿಸಲಿದೆಯಂತೆ.
ಅದ್ಧೂರಿ ಫೈಟ್ಸ್, ವಿಜಯ್ – ಅನನ್ಯಾ ಪಾಂಡೆ ನಡುವಿನ ರೊಮ್ಯಾನ್ಸ್, ತಾಯಿ ಮಗನ ನಡುವಿನ ಅದ್ಭುತ ಸೆಂಟಿಮೆಂಟ್ ದೃಶ್ಯಗಳು…ಎಲ್ಲವೂ ಚಿತ್ರದಲ್ಲಿ ಹೈಲೈಟ್ ಆಗಲಿದೆ ಎಂಬುದು ‘ಲೈಗರ್’ ಚಿತ್ರದ ಟ್ರೇಲರ್ ನಿಂದ ಸ್ಪಷ್ಟವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಈ ಟ್ರೈಲರ್ ಅನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ್ದಾರೆ.








