ವಿದ್ಯುತ್ ಅಭಾವ – ಮೊಬೈಲ್, ಕ್ಯಾಂಡಲ್ ಬೆಳಕಿನಲ್ಲಿ ಗರ್ಭಿಣಿಗೆ ಹೆರಿಗೆ…

1 min read

ವಿದ್ಯುತ್ ಅಭಾವ – ಮೊಬೈಲ್, ಕ್ಯಾಂಡಲ್ ಬೆಳಕಿನಲ್ಲಿ ಗರ್ಭಿಣಿಗೆ ಹೆರಿಗೆ…

ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ  ಕಾರಣ ಮೊಲೈಲ ಟಾರ್ಚ್ ಮತ್ತು ಕ್ಯಾಂಡಲ್ ಲೈಟ್ ನಲ್ಲಿ ಗರ್ಭಿಣಿ ಗೆ  ಹೆರಿಗೆ ಮಾಡಿಸಿದ ಘಟನೆ ಆಂಧ್ರಪ್ರದೇಶದ ನರಸೀಪಟ್ಟಣಂನ ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ವಿಶಾಖಪಟ್ಟಣಂ ಬಳಿಯ ಹೊಸದಾಗಿ ಜಿಲ್ಲೆಯಾಗಿ ರೂಪಗೊಂಡ ಅನಕಪಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.  ಕರೆಂಟ್ ಹೊದ ಬಳಿಕ  ಆಸ್ಪತ್ರೆಯಲ್ಲಿ ಜನರೇಟರ್ , ಯುಪಿಎಸ್ ಬ್ಯಾಕಪ್ ಇಲ್ಲದೇ ಇರುವುದಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿ ಮಹಿಳೆಗೆ ಹೆರಿಗೆ  ನೋವು ಕಾಣಿಸಿಕೊಂಡಿದ್ದು  ಕರೆಂಟ್ ಇಲ್ದ ಕಾರಣ ಆಸ್ಪತ್ರೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಟಾರ್ಚ್ ಬಳಸಿ  ಹೆರಿಗೆ ಮಾಡಿಸಲಾಗಿದೆ.  ಅದೃಷ್ಟವಶಾತ್  ಯಾವುದೇ ತೊಡಕುಗಳಿಲ್ಲದೆ ಮಗು ಆರೋಗ್ಯವಾಗಿ ಟಾರ್ಚ್ ಬೆಳಕಿನಲ್ಲಿ ಜನಿಸಿದೆ.

 “ಆಂಧ್ರಪ್ರದೇಶ ರಾಜ್ಯವು ಕತ್ತಲೆಯಲ್ಲಿದೆ. ತೀವ್ರ ವಿದ್ಯುತ್ ಕಡಿತದಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅನಧಿಕೃತ ವಿದ್ಯುತ್ ಕಡಿತದಿಂದ ಹಳ್ಳಿಗಳಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಏನು? ವಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಅವರು ವೀಡಿಯೋ ಶೇರ್ ಮಾಡಿ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

Andhra Hospital Faces 8-Hour Power Cut, Woman Delivers Baby Under Torch Light

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd