Andre Russell : ಆಂಡ್ರೆ ರಸೆಲ್ ಬೆತ್ತಲೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ವೆಸ್ಟ್ ಇಂಡೀಸ್ ಕ್ರಿಕೆಟಿಗ ಆಲ್ ರೌಂಡರ್ ಆಂಡ್ರೆ ರಸೆಲ್ ಬೆತ್ತಲಾಗಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಂಡ್ರೆ ರಸೆಲ್ ತಮ್ಮ ನಗ್ನ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಈ ಪೋಟೋ ನೋಡಿ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಶಾಪಿಂಗ್ ಮಾಲ್‌ನಲ್ಲಿ ಕನ್ನಡಿಯ ಮುಂದೆ ನಿಂತು ಫೋಟೋ ತೆಗೆದುಕೊಂಡಿರುವ ರಸೆಲ್, ತನ್ನ ಖಾಸಗಿ ಭಾಗವನ್ನು ತಲೆಬುರುಡೆಯ ಎಮೋಜಿಯಿಂದ ಕವರ್ ಮಾಡಿದ್ದಾರೆ. ಬಳಿಕ ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಂಡ್ರೆ ರಸೆಲ್ ಬೆತ್ತಲೆ ಫೋಟೋ ಸಂಚಲನ ಮೂಡಿಸಿದೆ.







