Andrew Symonds | ಕಾರು ಅಪಘಾತ: ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ನಿಧನ

1 min read
Andrew Symonds dies in a car accident saaksha tv

Andrew Symonds dies in a car accident saaksha tv

Andrew Symonds | ಕಾರು ಅಪಘಾತ: ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ನಿಧನ

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.  

ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ಸೈಮೆಂಡ್ಸ್ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.

46 ವರ್ಷದ ಕ್ರಿಕೆಟಿಗ ಸೈಮಂಡ್ಸ್‌ 26 ಟೆಸ್ಟ್‌, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್‌ ಹಾಗು ರಾಡ್‌ ಮಾರ್ಷ್‌ ನಿಧನದ ನಂತರ ಆಸೀಸ್‌ ಕ್ರಿಕೆಟ್‌ಗಿದು ಮತ್ತೊಂದು ಬೇಸರದ ಸುದ್ದಿಯಾಗಿದೆ.

Andrew Symonds dies in a car accident  saaksha tv
Andrew Symonds dies in a car accident saaksha tv

 ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್ರೌಂಡರ್‌ಗಳಲ್ಲಿ ಆಂಡ್ರ್ಯೂ ಸೈಮಂಡ್ಸ್‌ ಸಹ ಒಬ್ಬರಾಗಿದ್ದರು.

ಬ್ಯಾಟಿಂಗ್‌, ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ನಲ್ಲೂ  ಸೈಮಂಡ್ಸ್‌ ಛಾಪು ಮೂಡಿದ್ದರು.

 2003 ರಿಂದ 2007ರವರೆಗೆ ಆಸ್ಟ್ರೇಲಿಯಾ ಗೆದ್ದಿರುವ ಸತತ ಎರಡು ಏಕದಿನ ವಿಶ್ವಕಪ್‌ ತಂಡದ ಭಾಗವಾಗಿದ್ದರು.

 ಆಂಡ್ರ್ಯೋ ಸೈಮಂಡ್ಸ್ 26 ಟೆಸ್ಟ್ ಪಂದ್ಯಗಳಿಂದ 1462 ರನ್‌ ಗಳಿಸಿದ್ದರು.

ಅಲ್ಲದೇ 198 ಏಕದಿನ ಪಂದ್ಯಗಳಿಂದ 39.75ರ ಸರಾಸರಿ ಹಾಗೂ 92.44ರ ಸ್ಟ್ರೈಕ್‌ ರೇಟ್‌ನಲ್ಲಿ 5088 ರನ್‌ ಕಲೆಹಾಕಿದ್ದರು.

 ಟಿ20 ಕ್ರಿಕೆಟ್‌ ನಲ್ಲಿ ಸೈಮಂಡ್ಸ್, 48.12ರ ಸರಾಸರಿ ಹಾಗೂ 169.34ರ ಸ್ಟ್ರೈಕ್‌ ರೇಟ್‌ನಲ್ಲಿ 337 ರನ್‌ಗಳಿಸಿದ್ದರು.

Andrew Symonds dies in a car accident

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd