Anil Kumble | ವಿಕ್ರಾಂತ್ ರೋಣ ಸಿನಿಮಾಗೆ ಕುಂಬ್ಳೆ ಮೆಚ್ಚುಗೆ
ಒಟಿಟಿಯಲ್ಲಿ ಕಿಚ್ಚ ಸುದೀಪ್ ಅಭಿನಯ ವಿಕ್ರಾಂತ್ ರೋಣ ಸಿನಿಮಾ ಭಾರಿ ಸದ್ದು ಮಾಡುತ್ತಿದೆ.
ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮೊದಲ ದಿನವೇ ದಾಖಲೆ ಮಟ್ಟದ ವೀವ್ಸ್ ಪಡೆದುಕೊಂಡಿದೆ.
ಈ ನಡುವೆ ಈ ಸಿನಿಮಾವನ್ನು ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ”ವಿಕ್ರಾಂತ್ ರೋಣ’ ಸಿನಿಮಾ ವೀಕ್ಷಿಸಿದೆ.
ಆತ್ಮೀಯ ಗೆಳೆಯ ಸುದೀಪ್ ಅದ್ಭುತವಾದ ನಟನೆ ಮಾಡಿದ್ದಾರೆ. ಸಿನಿಮಾದ ಕೊನೆಯವರೆಗೆ ಕುತೂಹಲ ಕಾಯ್ದಿರಿಸಿಕೊಂಡಿರುತ್ತದೆ ಸಿನಿಮಾ.
ವಿಜಯ್ ಪ್ರಕಾಶ್ ಹಾಡಿರುವ ಹಾಡು ಚೆನ್ನಾಗಿದೆ. ನಿರ್ದೇಶಕ ಅನುಪ್ ಭಂಡಾರಿ ಹಾಗೂ ಇಡೀಯ ತಂಡಕ್ಕೆ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.
ನಿರೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.
ಇನ್ನು ಥಿಯೇಟರ್ ಅಂಗಳದಲ್ಲಿ ವಿಕ್ರಾಂತ್ ರೋಣ ಇನ್ನೂ ಚಾಲ್ತಿಯಲ್ಲಿದ್ದು, 215 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.