ಕಾಲ್ಗೆಜ್ಜೆ ಧರಿಸುವುದು ಫ್ಯಾಷನ್ ಮಾತ್ರವಲ್ಲ, ಅದಕ್ಕೂ ಇದೆ ವೈಜ್ಞಾನಿಕ ಕಾರಣ

1 min read

ಕಾಲ್ಗೆಜ್ಜೆ ಧರಿಸುವುದು ಫ್ಯಾಷನ್ ಮಾತ್ರವಲ್ಲ, ಅದಕ್ಕೂ ಇದೆ ವೈಜ್ಞಾನಿಕ ಕಾರಣ

ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆ ಧರಿಸುವ ಪ್ರತಿಯೊಂದು ಆಭರಣಕ್ಕೂ ತನ್ನದೇ ಆದ ವೈಜ್ಞಾನಿಕ ಮತ್ತು ಅರ್ಥಪೂರ್ಣ ಕಾರಣಗಳಿರುತ್ತವೆ.    ಅದರಲ್ಲಿ ಕಾಲ್ಗೆಜ್ಜೆ, ಕಾಲುಂಗರಗಳೂ ಒಂದು. ಕಾಲ್ಗೆಜ್ಜೆಯನ್ನ ವಿವಾಹಿತ ಮಹಿಳೆಯ ವ್ಯಕ್ತಿತ್ವ  ಭಾಗದಂತೆ ಕಾಣಲಾಗುತ್ತದೆ.   ಕಾಲ್ಗೆಜ್ಜೆಗಳು  ಕಾಲಿನ ಸೌಂದರ್ಯವನ್ನ ಹಿಮ್ಮಡಿಗೊಳಿಸುವ ಆಭರಣಗಳು ಅಷ್ಟೆ ಅಲ್ಲ.  ಕಾಲುಂಗುರ, ಕಾಲ್ಗೆಜ್ಜೆಗಳು   ಪಾದದ ಸೌಂದರ್ಯವನ್ನು ಹೆಚ್ಚಿಸುವ  ಜೊತೆಗೆ ದೇಹಕ್ಕೆ ಹಲವಾರು ಆರೋಗ್ಯಕರ ಲಾಭಗಳನ್ನ ತಂದುಕೊಡುತ್ತವೆ.  ಹಾಗಾದರೆ ವಿವಾಹಿತ ಮಹಿಳೆಯ  ಕಾಲುಂಗುರ  ಧರಿಸುವುದು ಏಕೆ ಎಮದು ತಿಳಿಯಲು ಈ ಸ್ಟೋರಿ ಓದಿ….

ಕಾಲ್ಗೆಜ್ಜೆಗೆ, ಸುದೀರ್ಘ ಇತಿಹಾಸವಿದೆ. ಹಿಂದೂ ನಾಗರಿಕತೆಯಲ್ಲಿ  ಕಾಲ್ಗೆಜ್ಜೆ  ಧರಿಸುವುದನ್ನ ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು.  ಭಾರವಾದ ಕಾಲ್ಗೆಜ್ಜೆಗಳನ್ನ ಹೊಂದಿರುವ ಮಹಿಳೆಯರು ಶ್ರೀಮಂತಿಕೆಯನ್ನ ಪ್ರತಿನಿಧಿಸುತ್ತಿದ್ದರು.  ಪ್ರಾಚೀನ ಭಾರತದ  ದೇವಾಲಯದ ಶಿಲ್ಪಗಳನ್ನು ನೋಡಿದಾಗ, ಭಾರತದಲ್ಲಿ ಕಾಲ್ಗೆಜ್ಜೆಗಳ ಅಭ್ಯಾಸ ಸಾಕಷ್ಟು ಹಳೆಯದು ಎಂದು ತಿಳಿಯಬಹುದು.

ಮಹಿಳೆಯರ ಹದಿನಾರು ಅಲಂಕಾರಗಳಲ್ಲಿ ಕಾಲ್ಗೆಜ್ಜೆ  ಕೂಡ ಒಂದು. ಬಳೆ, ಬಿಂದಿಗೆ, ಸಿಂಧೂರದ ಬಳೆಗಳ ಜೊತೆಗೆ ಕಾಲ್ಗೆಜ್ಜೆ  ಕಾಲುಂಗುರಗಳೂ ಹದಿನಾರು ಅಲಂಕಾರಗಳಲ್ಲಿ ಸೇರಿಕೊಂಡಿವೆ. ಈ ಕಾರಣಕ್ಕಾಗಿ ವಿವಾಹಿತ ಮಹಿಳೆಯರು ಯಾವಾಗಲೂ ತಮ್ಮ ಕಾಲುಗಳಿಗೆ ಕಾಲ್ಗೆಜ್ಜೆ ಧರಿಸುತ್ತಾರೆ. ಸಾಮಾನ್ಯವಾಗಿ  ಬೆಳ್ಳಿ ಕಾಲ್ಗೆಜ್ಜೆಗಳನ್ನ ಧರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.  ಇದಕ್ಕೂ ವಿಶೇಷ ಕಾರಣವಿದೆ.

ಬೆಳ್ಳಿಯು ಚಂದ್ರನನ್ನ ಪ್ರತಿನಿಧಿಸುವ ಲೋಹ.  ಚಂದ್ರನನ್ನು ಶಿವನು ಸೃಷ್ಟಿಸಿದನೆಂದು ನಂಬಿಕೆ.  ಆದ್ದರಿಂದ ಬೆಳ್ಳಿಯನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿಯ ಕಾಲ್ಗೆಜ್ಜೆಗಳು ಯಾವಾಗಲೂ ದೈವಿಕ ಶಕ್ತಿಯನ್ನು ಆಕರ್ಷಿಸುತ್ತವೆ.  ಗೆಜ್ಜೆಯ ಸಪ್ಪಳ ನಕಾರಾತ್ಮಕ ಶಕ್ತಿಯನ್ನ  ದೂರ ಸರಿಸಿ ಪಾಸಿಟೀವ್  ಶಕ್ತಿಯನ್ನ ಕಾಪಾಡುತ್ತದೆ. ಈ ಮೂಲಕ  ಅಲ್ಲದೆ, ಕಣಕಾಲುಗಳನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಬೆಳ್ಳಿಯ  ಕಾಲ್ಗೆಜ್ಜೆಗಳೇ ಏಕೆ ?

ವಿಜ್ಞಾನದ ಪ್ರಕಾರ, ಬೆಳ್ಳಿ ಇತರ ಲೋಹಗಳಿಗಿಂತ ಹೆಚ್ಚು ಪ್ರತಿಕ್ರಿಯಾತ್ಮಕತೆಯನ್ನು(reactivity) ಹೊಂದಿದೆ.  ಭೂಮಿಯ ಏಳು ಶಕ್ತಿಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಲು ಬೆಳ್ಳಿಗೆ ಸಾಧ್ಯವಾಗುತ್ತದೆ.  ಅದಕ್ಕಾಗಿಯೇ ಬೆಳ್ಳಿಯ ಕಾಲ್ಗೆಜ್ಜೆಗಳನ್ನ  ಧರಿಸಬೇಕೆಂಬ ನಿಯಮವಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd