ಬೆಂಗಳೂರು : ಅನ್ನಭಾಗ್ಯ (Anna Bhagya) ಯೋಜನೆ ಜಾರಿಗೊಳಿಸಿದ್ದ ರಾಜ್ಯ ಸರ್ಕಾರ (State Government) ದೊಡ್ಡ ತಲೆನೋವು ಶುರುವಾಗಿದೆ. ಅಕ್ಕಿ (Rice) ಉತ್ಪಾದಿಸುವ ರಾಜ್ಯಗಳಲ್ಲಿಯೂ ಅಕ್ಕಿ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
4 ರಾಜ್ಯಗಳ ಜೊತೆಗೆ ಸರ್ಕಾರವು ಅಕ್ಕಿ ಖರೀದಿಯ ವಿಚಾರವಾಗಿ ಮಾತುಕತೆ ನಡೆಸಿದೆ. ಈ ಪೈಕಿ ಈಗಾಗಲೇ ಪಂಜಾಬ್, ತೆಲಂಗಾಣ ರಾಜ್ಯಗಳು ಅಕ್ಕಿ ನೀಡುವುದಿಲ್ಲ ಎಂದು ತಿಳಿಸಿವೆ ಛತ್ತೀಸ್‍ಗಢ (Chhattisgarh) ರಾಜ್ಯದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಿಗುವ ಭರವಸೆ ನೀಡಿದರೂ ಅಂದುಕೊಂಡಷ್ಟು ಪೂರೈಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಮಾಸಿಕವಾಗಿ ನಮ್ಮ ರಾಜ್ಯಕ್ಕೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಛತ್ತೀಸ್‌ಗಢ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ ನೀಡುತ್ತದೆ. ಆದರೆ, ಇನ್ನುಳಿದ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊರತೆ ಎದುರಾಗಲಿದೆ. ಅಕ್ಕಿ ಖರೀದಿ ಕುರಿತು ಆಂಧ್ರ ಪ್ರದೇಶ (Andhra Pradesh) ಸರ್ಕಾರದ ಜೊತೆಯೂ ಮಾತುಕತೆ ನಡೆಸಲಾಗುತ್ತಿದೆ.
ಛತ್ತೀಸ್‍ಗಡ ರಾಜ್ಯದ ಅಕ್ಕಿಯೂ ಸ್ವಲ್ಪ ದುಬಾರಿ ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದ ತಲೆಬಿಸಿಗೆ ಕಾರಣವಾಗಿದೆ ಕಳೆದ ವರ್ಷ 1 ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 34.28 ರೂ. ಸಬ್ಸಿಡಿ ನೀಡಿದ್ದರೆ, ರಾಜ್ಯ ಸರ್ಕಾರಗಳು 2 ಕೆಜಿ ನೀಡುತ್ತಿತ್ತು.








