ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ
ಬೆಂಗಳೂರು : ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.
ಮುಂದಿನ ತಿಂಗಳ 10 ರಂದು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ.14ರಂದು ಮತ ಎಣಿಕೆ ಆಗಲಿದೆ.
ಮುಂದಿನ ವರ್ಷದ ಜನವರಿ 5ಕ್ಕೆ 25 ಪರಿಷತ್ ಸದಸ್ಯರ ಅಧಿಕಾರದ ಅವಧಿ ಮುಕ್ತಾಯಗೊಳ್ಳಲಿದೆ.
ಈ ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ.
ಚುನಾವಣೆಗೆ ಸಂಬಂಧ ನವೆಂಬರ್ 16ಕ್ಕೆ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 23ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರಲಿದೆ.
ಇನ್ನು ಬೀದರ್ 01, ಕಲಬುರಗಿ 01, ವಿಜಯಪುರ 02, ಬೆಳಗಾವಿ 02, ಉತ್ತರ ಕನ್ನಡ 01, ಧಾರವಾಡ 02, ರಾಯಚೂರು 01, ಬಳ್ಳಾರಿ 01,
ಚಿತ್ರದುರ್ಗ 01, ಶಿವಮೊಗ್ಗ 01, ದಕ್ಷಿಣ ಕನ್ನಡ 02, ಚಿಕ್ಕಮಗಳೂರು 01, ಹಾಸನ 01, ತುಮಕೂರು 01, ಮಂಡ್ಯ 01, ಬೆಂಗಳೂರು 01,
ಬೆಂಗಳೂರು ಗ್ರಾಮಾಂತರ 01, ಕೋಲಾರ 01, ಕೊಡಗು 01, ಮೈಸೂರಿನ 02 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.