ಮೈಸೂರು : ರಾಜ್ಯ ಸರ್ಕಾರದಲ್ಲಿ ಉಪ್ಪಾರ ಸಮಾಜವನ್ನು ಕಡೆಸಲಾಗುತ್ತಿದೆ. ಭಗೀರಥ ಸಮಾಜಕ್ಕೆ ರಾಜಕೀಯ ಪ್ರಾತಿನಿದ್ಯ ಸಿಕ್ಕಿಲ್ಲ ಎಂದು ಭಗೀರಥ ಸಮಾಜದ ಮೈಸೂರು ಜಿಲ್ಲಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ್ಪಾರ ಸಮಾಜದ ಜನರು ತೀರಾ ಹಿಂದುಳಿದವರಾಗಿದ್ದು ಸರಿಯಾದ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಶೈಕ್ಷಣಿಕ ಹಾಗೂ ಆರ್ಥಿಕವಾಗೂ ಸಮಾಜ ಹಿಂದುಳಿದಿದ್ದು, ಬಹುತೇಕರು ಕೂಲಿನಾಲಿ ಅವಲಿಂಬಿಸಿರುವ ಕಾರ್ಮಿಕರೇ ಆಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಉಪ್ಪಾರ ಸಮಾಜಕ್ಕೂ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಸಂಘದ ಜಿಲ್ಲಾಧ್ಯಕ್ಷ ಎಸ್ ಯೋಗೇಶ್ ಆಗ್ರಹಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜಕ್ಕೆ ಸ್ವಲ್ಪವಾದರೂ ಪ್ರಾತಿನಿಧ್ಯ ಸಿಕ್ಕಿತ್ತು. ಆದ್ರೆ, ಸಧ್ಯದ ಬಿಜೆಪಿ ಸರ್ಕಾರದಲ್ಲಿ ಯಾವುದೇ ರಾಜಕೀಯ ಪ್ರಾತಿನಿದ್ಯ ಸಿಕ್ಕಿಲ್ಲ. ಹಾಗಾಗಿ, ಇನ್ನು ಮುಂದೆ ಆದರು ಖಾಲಿ ಇರುವ ನಿಗಮ ಲ, ಮಂಡಳಿಗಳ ಸ್ಥಾನಗಳಿಗೆ ಉಪ್ಪಾರ ಸಮಾಜವನ್ನು ಪರಿಗಣಿಸಿ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಇದೇ ವೇಳೆ ಉಪಸ್ಥಿತರಿದ್ದ ಭಗೀರಥ ಸಮಾಜದ ಅನೇಕ ಮುಖಂಡರು ನಮ್ಮ ಸಮಾಜಕ್ಕೆ ಒಳಿತಾಗುವ ನಡೆಯನ್ನು ಸರ್ಕಾರ ಇಡಬೇಕು ಇಲ್ಲದೇ ಹೋದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.
ಇನ್ನು ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಸಂಕಷ್ಟದಲ್ಲಿದ್ದ ಸಮಾಜಗಳಿಗೆ ನೆರವಿನ ಪ್ಯಾಕೇಜ್ ಘೋಷಿಸಿತ್ತು. ಮೂರು ಹಂತಗಳಲ್ಲಿ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ ಮಡಿವಾಳ, ಅಟೋ ಚಾಲಕರು ಹೀಗೆ ಸಮಾಜದ ವಿವಿಧ ಸ್ಥರಗಳಲ್ಲಿನ ಅಶಕ್ತರ ನೆರವಿಗೆ ಆರ್ಥಿಲ ಪ್ಯಾಕೇಜ್ ಘೋಷಣೆ ಮಾಡಿತ್ತಾದರೂ ಅದರಲ್ಲಿ ಉಪ್ಪಾರ ಸಮಾಜಕ್ಕೆ ಯಾವುದೇ ಆರ್ಥಿಕ ಪರಿಹಾರ ಘೋಷಣೆ ಮಾಡಿರಲಿಲ್ಲ. ಅದಲ್ಲದೇ ಇನ್ನು ಯಾವುದೇ ಸಮಾಜಕ್ಕೂ ಪ್ಯಾಕೇಜ್ ಘೋಷಣೆ ಮಾಡುವುದು ಸಾಧ್ಯವಿಲ್ಲ ಎಂದು ಮುಖ್ಯಂತ್ರಿಗಳು ಹೇಳಿದ್ದು ಇದೀಗ ಉಪ್ಪಾರ ಸಮಾಜವನ್ನ ಕೆರಳಿಸಿದಂತಿದೆ. ಹಾಗಾಗಿ ಆರ್ಥಿಕ ಮತ್ತು ರಾಜಕೀಯ ಪ್ರಾತಿನಿದ್ಯಕ್ಕಾಗಿ ಹೋರಾಟ ಮಾಡುತ್ತೆವೆ ಎನ್ನುವ ಎಚ್ಚರಿಕೆಯನ್ನು ಉಪ್ಪಾರ ಸಮಾಜದ ಸಂಘಗಳ ಮುಖಾಂತರ ರವಾನಿಸಿದ್ದಾರೆ.!








