ಸಾವು ಎಂದರೆ ಬಹುತೇಕರು ಭಯ ಪಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಬದುಕನ್ನು ಪ್ರೀತಿಸಿ, ಸಾಯುವ ಮುನ್ನ ತಮ್ಮ ಪ್ರೀತಿ ಪಾತ್ರರಿಗೆ ಸಂದೇಶ ಸಾರಿ ಸಾವನ್ನಪ್ಪಿದ್ದಾರೆ.
ಕೇಸಿ ಮ್ಯಾಕ್ಇಂಟೈರ್ ಎಂಬ ಮಹಿಳೆ ಅಂಡಾಶಯದ ಕ್ಯಾನ್ಸರ್ ನಿಂದ ಸಾವನ್ನಪ್ಪಿ, ಸಾವಿಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಾವನ್ನು ಘೋಷಿಸಿ ಪ್ರೀತಿ ಪಾತ್ರರಿಗೆ ಕೊನೆಯ ವಿದಾಯ ಹೇಳಿದ್ದಾರೆ.
ನಾನು ಈ ಜಗತ್ತಿನಲ್ಲಿ ಇಲ್ಲ ಎಂದರ್ಥ, ನನಗೆ ಅಂಡಾಶಯ ಕ್ಯಾನ್ಸರ್ ಇತ್ತು ಅದನ್ನು ನಾಲ್ಕನೇ ಹಂತವನ್ನು ತಲುಪಿತ್ತು. ಚಿಕಿತ್ಸೆ ಪಡೆದ ಬಳಿಕವೂ ಪುನರಾವರ್ತನೆಯಾಗಿದೆ. ವರ್ಜೀನಿಯಾ, ರೋಡ್ ಐಲೆಂಡ್ ಹಾಗೂ ನ್ಯಾಯಾರ್ಕ್ನಲ್ಲಿ ನನ್ನ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜತೆ ಕಳೆಯಲು ಅವಕಾಶ ದೊರೆತಿರುವುದಕ್ಕೆ ನಾನು ಧನ್ಯ ಎಂದು ಬರೆದುಕೊಂಡಿದ್ದಾರೆ.
ಕೇಸಿ ಅವರು ಮಕ್ಕಳು ಹಾಗೂ ವಯಸ್ಕರಿಗೆ ಪುಸ್ತಕಗಳನ್ನು ಪ್ರಕಟಿಸುವ ಪೆಂಗ್ವಿನ್ ರಾಂಡಮ್ ಹೌಸ್ನಲ್ಲಿ ಪ್ರಕಾಶಕರಾಗಿದ್ದರು. ನಾನು, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನಾವು ನಿಮ್ಮನ್ನು ಕಳೆದುಕೊಂಡುಬಿಟ್ಟೆವು ಎಂದು ಪತಿ ದುಃಖ ವ್ಯಕ್ತಪಡಿಸಿದ್ದಾರೆ.