ADVERTISEMENT
Saturday, October 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಭಾರತಕ್ಕೆ ಮತ್ತೊಬ್ಬ ಆರ್ಯಭಟ – ಮುಂಬೈಯ 10 ವರ್ಷದ ಪೋರ ಜಯದಿತ್ಯ

admin by admin
February 26, 2020
in International, Samagra karnataka, Sports
Share on FacebookShare on TwitterShare on WhatsappShare on Telegram

10 ವರ್ಷ ವಯಸ್ಸಿನ ಜಯದಿತ್ಯ ಅವಿನಾಶ್ ಶೆಟ್ಟಿ ಮುಂಬೈನ ಚಾಂಡಿವಲಿಯ ಪವಾರ್ ಪಬ್ಲಿಕ್ ಶಾಲೆಯ 5 ನೇ ತರಗತಿ ವಿದ್ಯಾರ್ಥಿ. ಕ್ರಿಕೆಟ್ ಆಟ ಈತನ ಇಷ್ಟದ ಕ್ರೀಡೆ. ಇಡ್ಲಿ ಮತ್ತು ಕೋರಿ ರೋಟಿ ತಿನ್ನಲು ಇಷ್ಟ ಪಡುವ ಈತ ಮಾರ್ವೆಲ್ ಸೂಪರ್ ಹೀರೋ ಮೂವಿ ಅಭಿಮಾನಿ. ‌ಇವನನ್ನು ಎಲ್ಲರಿಗಿಂತ ವಿಶೇಷ ಮತ್ತು ವಿಭಿನ್ನನನ್ನಾಗಿ ಮಾಡಿರುವುದು ಸಂಖ್ಯೆಗಳೊಂದಿಗೆ ಈತ ಮಾಡುವ ಮೋಡಿ, ಎಂತಹ ಕಷ್ಟದ ಲೆಕ್ಕಾಚಾರಗಳನ್ನು ವೇಗವಾಗಿ ಮಾಡುವ ಈತನ ಸಾಮರ್ಥ್ಯ.

ತನ್ನ ಅಸಾಧಾರಣ ಪ್ರತಿಭೆಯಿಂದಾಗಿ, ಜಯದಿತ್ಯ ಯಾರೂ ಊಹಿಸಲು ಆಗದ ಸಾಹಸಗಳನ್ನು ಸಾಧಿಸಿದ್ದಾನೆ. 2019 ರ ಮೆಮೋರಿಯಡ್ ಟರ್ಕಿ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಹಲವಾರು ಟ್ರೋಫಿಗಳನ್ನು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾನೆ. ಗಣಿತ ಎಂದರೆ ಹೆಚ್ಚಿನ ಮಕ್ಕಳು ಭಯಪಟ್ಟರೆ, ಜಯದಿತ್ಯ ಗಣಿತದೊಂದಿಗೆ ಆಟವಾಡುವ ಕೆಲವೇ ಕೆಲವು ಮ್ಯಾಥ್‌ಲೆಟ್‌ ನಲ್ಲಿ ಒಬ್ಬ. ಈತ ಅಂತರರಾಷ್ಟ್ರೀಯ ಮಟ್ಟದಲ್ಲಿ 13 ದೇಶಗಳ 168 ಸ್ಪರ್ಧಿಗಳ ವಿರುದ್ಧ ತನ್ನ ಪರಾಕ್ರಮವನ್ನು ಪ್ರದರ್ಶಿಸಿದ್ದಾನೆ.

Related posts

mysuru-royals-win-first-kppl-title-karnataka-pickleball-premier-league

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ

October 14, 2026
karnataka-pickleball-premier-league-kppl-jersey-unveiling

ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ*

October 6, 2026

ಟರ್ಕಿಯ ಇಸ್ತಾಂಬುಲ್ ನ ಪ್ರತಿಷ್ಠಿತ ಅಟತುರ್ಕ್ ಕಲ್ತೂರ್ ನಲ್ಲಿ 2019 ರ ಡಿಸೆಂಬರ್ 14 ರಿಂದ 16 ರವರೆಗೆ ನಡೆದ ಚಾಂಪಿಯನ್‌ಶಿಪ್‌ನಲ್ಲಿ, ವಿಶ್ವದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸಿ ಮಕ್ಕಳ ಮತ್ತು ಮುಕ್ತ ವಿಭಾಗಗಳಲ್ಲಿ 6 ಚಿನ್ನ, 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಒಳಗೊಂಡಂತೆ 6 ಟ್ರೋಫಿಗಳನ್ನು ಮತ್ತು 9 ಪದಕಗಳನ್ನು ಗೆದ್ದು, ಹೊಸ ‌ವಿಶ್ವ ದಾಖಲೆಗಳನ್ನು ಮಾಡಿದ್ದಾನೆ.  ಮಗನ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಜಯದಿತ್ಯ ಅವರ ತಂದೆ ಅವಿನಾಶ್ ಶೆಟ್ಟಿ ರೆಸ್ಟೋರೆಂಟ್ ನಡೆಸುತ್ತಿದ್ದು, ತಾಯಿ ಶ್ರೀಮತಿ ನವಾಝೇಶ ಶೆಟ್ಟಿ 15 ವರ್ಷಗಳ ಕಾಲ ಐಟಿಇಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದರು. ನಂತರ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಲು ಕೆಲಸಕ್ಕೆ ರಾಜೀನಾಮೆಯನ್ನಿತ್ತು ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ.

ಗುಜರಾತ್‌ನ ವಾಪಿ ಮೂಲದ ‘ಭಾರತದ ಮಾನಸಿಕ ಕ್ರೀಡೆಗಳ ಪ್ರವರ್ತಕ’ ಮತ್ತು ಅವರ ವಾರ್ಡ್‌ನೊಂದಿಗೆ ಕೆಲಸ ಮಾಡಿದ ಜಯದಿತ್ಯ ಅವರ ತರಬೇತುದಾರ ಆಧುನಿಕ ದ್ರೋಣಾಚಾರ್ಯ ಎಂದು ಕರೆಯಲ್ಪಡುವ ಶ್ರೀ ಯೂಸಿಬಿಯಸ್ ನೊರೊನ್ಹಾ. ಜಯದಿತ್ಯ ಕಲಿಕೆಗೆ ತೊಂದರೆಯಾಗದಂತೆ ವಾರಾಂತ್ಯದಲ್ಲಿ ಪಂದ್ಯಾವಳಿಗಳಿಗೆ ಮುಂಚಿತವಾಗಿ ವಾಪಿಗೆ ಪ್ರಯಾಣಿಸಿ ತರಬೇತಿ ಪಡೆಯುತ್ತಾನೆ. ಆದರೆ ಮಾನಸಿಕ ಕ್ರೀಡೆಗಳು ವಿಶ್ವದ ಇತರ ಭಾಗಗಳಲ್ಲಿ ಗುರುತಿಸಿಕೊಂಡಂತೆ, ಭಾರತದಲ್ಲಿ ಇದು ಬೇರೆ ಕ್ರೀಡೆಗಳಂತೆ ಗುರುತಿಸಲ್ಪಟ್ಟಿಲ್ಲ. ಹಾಗಾಗಿ ಸರ್ಕಾರದಿಂದ ಅಥವಾ ಇನ್ಯಾವುದೇ ಸಂಘ ಸಂಸ್ಥೆಗಳಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಜಯದಿತ್ಯನಿಗೆ ಮತ್ತಷ್ಟು ಪ್ರೋತ್ಸಾಹ ದೊರಕಿದಲ್ಲಿ ಈತ ಭಾರತದ ಮತ್ತೊಬ್ಬ ಆರ್ಯಭಟನಾಗುವುದರಲ್ಲಿ‌ ಯಾವುದೇ ಸಂಶಯವಿಲ್ಲ.

Tags: jayadityaMemorial Turkey Championship
ShareTweetSendShare
Join us on:

Related Posts

mysuru-royals-win-first-kppl-title-karnataka-pickleball-premier-league

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ

by admin
October 14, 2026
0

ಬೆಂಗಳೂರು: ಕರ್ನಾಟಕ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಮೊದಲ ಆವೃತ್ತಿಯು ರೋಚಕ ಅಂತ್ಯ ಕಂಡಿದ್ದು, ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು...

karnataka-pickleball-premier-league-kppl-jersey-unveiling

ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ*

by admin
October 6, 2026
0

*ಬೆಂಗಳೂರು:* ಕರ್ನಾಟಕ ಸ್ಟೇಟ್ ಪಿಕಲ್‌ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್'...

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

by admin
October 5, 2026
0

ಬೆಂಗಳೂರು: ಗಾಯಕ್ಕೆ ಚಿಕಿತ್ಸೆ ನೀಡಿ ಚೇತರಿಕೆಗೊಳಿಸುವುದರಲ್ಲೇ ಸೀಮಿತವಾಗದೆ, ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಪುನರ್‌ನಿರ್ಮಿಸಿ, ಶಕ್ತಿ ಹೆಚ್ಚಿಸಿ, ಕ್ರೀಡೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡುವ ಸಮಗ್ರ...

nita-ambani-congratulates-asian-games-medal-winners-reliance-foundation

ಏಷ್ಯನ್ ಗೇಮ್ಸ್ ಪದಕ ಸಾಧಕರಿಗೆ ನೀತಾ ಎಂ. ಅಂಬಾನಿ ವಿಶೇಷ ಅಭಿನಂದನೆ

by admin
October 4, 2026
0

• ಕ್ರೀಡಾಕೂಟದಲ್ಲಿ ಭಾರತ ಗೆದ್ದ 85 ಪದಕಗಳ ಪೈಕಿ 29 ಪದಕಗಳಿಗೆ ರಿಲಯನ್ಸ್ ಫೌಂಡೇಶನ್ ಕೊಡುಗೆ ನೀಡಿದೆ. • ರಿಲಯನ್ಸ್ ಫೌಂಡೇಶನ್‌ನೊಂದಿಗೆ ಗುರುತಿಸಿಕೊಂಡಿದ್ದ 48 ಕ್ರೀಡಾಪಟುಗಳು ಭಾರತ...

nita-ambani-inspiring-message-to-indian-athletes-asian-games-2026-reliance-foundation

ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ: ನೀತಾ ಅಂಬಾನಿ

by admin
September 21, 2026
0

* ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಸಂದೇಶ * ಏಷ್ಯಾಡ್ನಲ್ಲಿ ರಿಲಯನ್ಸ್ ಫೌಂಡೇಶನ್ ಬೆಂಬಲಿತ 48 ಕ್ರೀಡಾಪಟುಗಳು ಭಾಗಿ ಮುಂಬೈ, 2026, ಸೆಪ್ಟೆಂಬರ್ 20:...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram