ಬೆಳಗಾವಿ: ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮತ್ತೊಮ್ಮೆ ಮಾರಾಮಾರಿ ಸಂಭವಿಸಿದೆ.
ಕಳೆದ ತಿಂಗಳ ಹಿಂದೆಯಷ್ಟೇ ಇಂತಹ ಘಟನೆಯೊಂದು ನಡೆದಿದ್ದು, ಈಗ ಮತ್ತೊಮ್ಮೆ ಇಂತಹ ಘಟನೆ ಬೆಳಕಿಗೆ ಬಂದಿದೆ. ಮೊಬೈಲ್ ಬಳಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಕೈದಿಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ವಿಚಾರಣಾಧೀನ ಕೈದಿ ವಾಸುದೇವ್ ನಾಯ್ಕ್ (34) ಗಾಯಗೊಂಡಿದ್ದಾನೆ. ಈತನಿಗೆ ಹಿಂಡಲಗಾ ಜೈಲಿನರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ವಾಸುದೇವ ಕಳೆದ 8 ತಿಂಗಳಿಂದ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಆದರೆ, ಈತನಿದ್ದ ಸೆಲ್ ನಲ್ಲಿ ಮತ್ತೊಬ್ಬ ಕೈದಿ ಮೊಬೈಲ್ ಬಳಕೆ ಮಾಡುತ್ತಿದ್ದ. ಇದನ್ನ ಪ್ರಶ್ನಿಸಿದ್ದಕ್ಕೆ ವಾಸುದೇವ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಆತನ ತಾಯಿ ಮಾತ್ರ ಜೈಲಿನಲ್ಲಿರುವ ಸಿಬ್ಬಂದಿಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗಾಯಾಳುವನ್ನು ನೋಡಲು ಕುಟುಂಬಸ್ಥರು ಆಗಮಿಸಿದ್ದಾರೆ. ಈ ವೇಳೆ ತಾಯಿ ಸುನಂದಾ ಅವರು ಹಣ ನೀಡದಿರುವುದಕ್ಕೆ ಪೊಲೀಸರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ದಿಢೀರ್ ಭೇಟಿ ನೀಡಿದ ಬೆಳಗಾವಿಯ 1ನೇ ಜೆಎಂಎಫ್ಸಿ ನ್ಯಾಯಾಧೀಶ ಮಹದೇವ್, ಮಾರಾಮರಿ ಭೇಟಿ ನೀಡಿದ್ದೇನೆ. ಗಲಾಟೆ ನಡೆದಿರುವುದು ಸತ್ಯ. ಮೊಬೈಲ್ ವಿಚಾರವಾಗಿ ಈ ಜಗಳ ನಡೆದಿದೆ. ಗಾಯಗೊಂಡ ಕೈದಿಯೂ ಶೌಚಾಲಯಕ್ಕೆ ಹೋಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಇದರ ಜೊತೆಗೆ ಸೆಲ್ನಲ್ಲಿದ್ದ ಕೈದಿ ಕೂಡ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಎಂದು ಆತನೇ ಹೇಳಿದ್ದಾಗಿ ಹೇಳಿದ್ದಾರೆ. ಜೈಲಿನೊಳಗೆ ಕೆಲವೊಂದು ವಸ್ತುಗಳು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.