ಬೆಂಗಳೂರು ನಗರದ ನಾಗರಿಕರಿಗೆ ಬಿಬಿಎಂಪಿಯಿಂದ ಮತ್ತೊಂದು ಕಠಿಣ ಕ್ರಮ ಎದುರಾಗಿದ್ದು, ಕಟ್ಟಡ ನಿರ್ಮಾಣದ ಪ್ರಕ್ರಿಯೆಯಲ್ಲಿ ಹೊಸ ನಿಯಮ ಜಾರಿಗೆ ಬರುತ್ತಿದೆ. ಜುಲೈ 1ರಿಂದ ನಗರದಲ್ಲಿ ಕಟ್ಟಡ ನಿರ್ಮಿಸಲು ಇ-ಖಾತಾ ಕಡ್ಡಾಯಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಆದೇಶವನ್ನು ಹೊರಡಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಆದೇಶ ಹೊರಡಿಸಿದ್ದು, ಇಂದಿನಿಂದ ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಿಗಾಗಿ ಅರ್ಜಿ ಸಲ್ಲಿಸುವವರು ಈಗ ಇ-ಖಾತಾ ಹೊಂದಿರಲೇಬೇಕು. ಈ ಮೂಲಕ ಶಾಖೆಗಳಲ್ಲಿ ಅನುಚಿತ ವ್ಯವಹಾರ ಹಾಗೂ ದಕ್ಷತೆಯ ಕೊರತೆ ತಡೆಯುವುದು ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಈ ಹೊಸ ನಿಯಮದಂತೆ, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಹೌಸ್ ಸೈಟ್ ಅಥವಾ ಸ್ವತ್ತುಗಳಿಗೆ ಇ-ಖಾತಾ ಅಸೈನ್ ಮಾಡಬೇಕಾಗುತ್ತದೆ. ಈಗಾಗಲೇ ಸ್ವತ್ತು ಹೊಂದಿರುವವರು ಕೂಡ ತಮ್ಮ ಹಕ್ಕುಪತ್ರ, ನೋಂದಣಿ ದಾಖಲೆ ಹಾಗೂ ಇತರ ದಾಖಲೆಗಳೊಂದಿಗೆ BBMP ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ ಇ-ಖಾತಾ ಪಡೆಯಬೇಕು.
ಇ-ಖಾತಾ ಸಿಸ್ಟಂ ಮೂಲಕ ಆಸ್ತಿ ವಿವರಗಳು ಪಾರದರ್ಶಕವಾಗುತ್ತವೆ ಮತ್ತು ತೆರಿಗೆ ಸಂಗ್ರಹ ವ್ಯವಸ್ಥೆ ಸುಗಮವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.








