ಹಾವೇರಿ : ಒಳಮೀಸಲಾತಿ (Reservation) ವಿರೋಧಿಸಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕ್ಷೇತ್ರದಲ್ಲಿ ಬಂಜಾರ (Banjara) ಸಮುದಾಯದಿಂದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸರ್ಕಾರದ ನಡೆಯನ್ನು ಖಂಡಿಸಿ ತಹಶೀಲ್ದಾರ್ ಕಚೇರಿ (AC office) ಬಳಿ ಬಂಜಾರ ಸಮುದಾಯದ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಅವರನ್ನು ರಕ್ಷಿಸಿದ್ದಾರೆ. ಸ್ವಾಮೀಜಿಯವರನ್ನು ಗುಂಡೂರು (Gunduru) ಗ್ರಾಮದ ತಿಪ್ಪೆಸ್ವಾಮಿ ಎಂದು ಗುರುತಿಸಲಾಗಿದೆ. ಸದ್ಯ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.








