Anushka Shetty : ಭೂತಕೋಲದಲ್ಲಿ ಭಾಗಿಯಾಗಿದ್ದ ಸ್ವೀಟಿ..!!
ಸೌತ್ ನ ಸ್ಟಾರ್ ನಟಿ , ಕರಾವಳಿಯ ಚೆಲುವೆ , ಮುದ್ದು ಕನ್ನಡತಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದಾರೆ.
ವಿಶೇಷ ಅಂದ್ರೆ ಸ್ವೀಟಿ ತಮ್ಮ ಮನೆಯ ಭೂತಕೋಲದಲ್ಲಿ ಭಾಗಿಯಾಗಿದ್ದಾರೆ. ಈ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ..
ಬಾಹುಬಲಿ 2 ಸಕ್ಸಸ್ ನಂತರ ನಿಶಬ್ಧಂ ಚಿತ್ರದಲ್ಲಿ ಕಾಣಿಸಿಕೊಂಡ ಮೇಲೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳದೇ ಅನುಷ್ಕಾ ಸೈಲೆಂಟ್ ಆಗಿದ್ದಾರೆ.
ಆದರೆ ಈಗ ಹೊಸ ಪ್ರತಿಭೆ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಚಿತ್ರದ ಮೂಲಕ ಸ್ವೀಟಿ ಕಮ್ ಬ್ಯಾಕ್ ಮಾಡ್ತಿದ್ದಾರೆ.