ಮೈಸೂರು ದಸರಾ ಮಹೋತ್ಸವ ಸಂಭ್ರಮದ ಆಚರಣೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಅ. 13ರಂದು ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ತಯಾರಿ ನಡೆಸುತ್ತಿದೆ. ಅದೇ ದಿನ ಚಾಮುಂಡಿ ಚಲೋ ಜಾಥಾ ನಡೆಸುವುದಾಗಿ ಬಿಜೆಪಿ ತಯಾರಿ ನಡೆಸಿದೆ.
ಈ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮಹಿಷ ದಸರಾ ನಡೆಸಿದರೆ ಸಂಘರ್ಷಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಚಿವ ಡಾ. ಮಹದೇವಪ್ಪ ನೇತೃತ್ವದಲ್ಲಿ ದಸರಾ ಆಚರಣೆಗೆ ಮೈಸೂರು ಸಜ್ಜಾಗುತ್ತಿದ್ದಾರೆ. ಟಿಪ್ಪು, ಹೈದರಾಲಿ ಕಾಲ ಬಿಟ್ಟು ದಸರಾ 414 ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ದಸರಾ, ನವರಾತ್ರಿ, ಚಾಮುಂಡಿ ಮಹಿಮೆ, ಆಷಾಢ, ವರ್ಧಂತಿ, ತಪ್ಪೋತ್ಸವ ಎಲ್ಲವೂ ಮೈಸೂರಿನ ಜನರಿಗೆ ಹಾಗೂ ಹೊರಗಿನವರಿಗೆ ತಿಳಿದಿದೆ. ಆದರೆ, ಆದರೆ, ಈಗ ಮಹಿಷ ದಸರಾ ಎನ್ನುವ ಅಸಹ್ಯ ಪದ ಶುರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಷಾಸುರ ಮೂಲ ನಿವಾಸಿಗಳಿಗೆ ಯಾವಾಗ ದೇವರಾದ ಗೊತ್ತಿಲ್ಲ.ದೆವ್ವ ಯಾವಾಗ ದೇವರಾಯ್ತು ಗೊತ್ತಿಲ್ಲ. ದೇವಿಯನ್ನು ದೆವ್ವ, ದೆವ್ವವನ್ನು ದೇವರು ಮಾಡುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.