ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ ಅರಬ್ಟೆಕ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿ (Arabtech burj khalifa liquidation)
ದುಬೈ, ಅಕ್ಟೋಬರ್ 04: ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ನಿರ್ಮಿಸಿದ ಅರಬ್ಟೆಕ್ ಆರ್ಥಿಕ ಬಿಕ್ಕಟ್ಟಿನಿಂದಾಗಿ ದಿವಾಳಿಯಾಗಿರುವುದಾಗಿ ಘೋಷಿಸಿದೆ.
ಎಇ ನಿರ್ಮಾಣ ದೈತ್ಯ, ಅರಬ್ಟೆಕ್ ನ ಅಧ್ಯಕ್ಷ ವಲೀದ್ ಅಲ್ ಮೊಕರರಾಬ್ ಅಲ್ ಮುಹೈರಿ ಇತ್ತೀಚಿನ ವರ್ಷಗಳಲ್ಲಿ, ನಿರ್ಮಾಣ ಕ್ಷೇತ್ರದಲ್ಲಿ ಸೀಮಿತ ದ್ರವ್ಯತೆಯು ಅರಬ್ಟೆಕ್ನ ಯೋಜನೆಗಳ ಪ್ರಗತಿಯ ಮೇಲೆ ಪರಿಣಾಮ ಬೀರಿತ್ತು. ಇದೀಗ ಕೋವಿಡ್-19 ರ ಪರಿಣಾಮಗಳಿಂದ ಅರ್ಥಿಕ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಹೇಳಿದ್ದಾರೆ.(Arabtech burj khalifa liquidation)
ಡಿಎ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರವು ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿದೆಯೇ? Fact check
ಕಾನೂನು ಮತ್ತು ವಾಣಿಜ್ಯ ಅರ್ಹತೆಗಳನ್ನು ಮುಂದುವರಿಸುವ ಪ್ರಯತ್ನಗಳು ಮತ್ತು ಕಂಪನಿಯ ಹಣಕಾಸು ಮತ್ತು ಕಾರ್ಯಾಚರಣೆಗಳ ಪುನರ್ರಚನೆಯ ಹೊರತಾಗಿಯೂ, ಅರಬ್ಟೆಕ್ ಗೆ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ಅಕ್ಟೋಬರ್ 7ರಿಂದ ಬೆಂಗಳೂರು – ಮಂಗಳೂರು ಕೇಂದ್ರ ವಿಶೇಷ ಎಕ್ಸ್ಪ್ರೆಸ್ ರೈಲಿನ ತಾತ್ಕಾಲಿಕ ನಿಲುಗಡೆ
ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ, ಪಾಲುದಾರರು ದಿವಾಳಿ( ಲಿಕ್ವಿಡೇಷನ್) ಅರ್ಜಿ ಸಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ. ಎಇ ನಿರ್ಮಾಣ ದೈತ್ಯನ ಈ ನಿರ್ಧಾರದಿಂದ ಸುಮಾರು 40 ಸಾವಿರ ನೌಕರರು ಬದುಕು ಅತಂತ್ರವಾಗಲಿದೆ. ಅಷ್ಟೇ ಅಲ್ಲ ದಶಕಗಳಿಂದ ಕಂಪನಿಯೊಂದಿಗೆ ವ್ಯವಹರಿಸುತ್ತಿದ್ದ, ಖಾಸಗಿ ಕಂಟ್ರಾಕ್ಟರ್ಗಳ ಭವಿಷ್ಯವೂ ಡೋಲಾಯಮಾನವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ