ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು : ಯೆಲ್ಲೋ ಅಲರ್ಟ್ ಘೋಷಿಸಿದ ಕೇಜ್ರಿವಾಲ್
ಇಡೀ ವಿಶ್ವಾದ್ಯಂತ ಇದೀಗ ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕ ಮನೆ ಮಾಡಿದೆ.. ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೋವಿಡ್ ಪ್ರಜರಣಗಳ ಸಂಖ್ಯೆ ಹೆಚ್ಚಾಗ್ತಿದೆ.. ಪರಿಣಾಮ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದ್ದು, ಈಗ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ ಸಿಎಂ ಅರವಿಂದ್ ಕೇಜ್ರಿವಾಲ್.. ಉನ್ನತ ಮಟ್ಟದ ಸಭೆಯ ಬಳಿಕ ಮುಖ್ಯಮಂತ್ರಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ಜನ ಭಯಪಡಬೇಕಾದ ಅಗತ್ಯವಿಲ್ಲ ಎಂದು ಈ ವೇಳೆ ಕೇಜ್ರಿವಾಲ್ ತಿಳಿಸಿರೋದಾಗಿ ರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗಿದೆ..
ಅಮದ್ಹಾಗೆ Yellow Alert ಅಡಿಯಲ್ಲಿ Night Curfue, ಶಾಲೆ , ಕಾಲೇಜುಗಳ ಬಂದ್ ಆಗಿರಲಿದೆ.. ಅವಶ್ಯ ವಸ್ತುವಿನಡಿ ಬರದ ಸಾಮಗ್ರಿಗಳ ಅಂಗಡಿಯನ್ನು ದಿನ ಬಿಟ್ಟು ದಿನ ತೆರೆಯಲು ಅವಕಾಶ ನೀಡಲಾಗಿದೆ.. ಇನ್ನೂ ಮೆಟ್ರೊ ರೈಲು ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಆಸನ ಸಾಮರ್ಥ್ಯ ಕಡಿಮೆ ಮಾಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಕೂಡ ಕೇಜ್ರಿವಾಕ್ ತಿಳಿಸಿದ್ದಾರೆ..