ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಕರೋನಾ ಪಾಸಿಟೀವ್ …
ದೇಶದಲ್ಲಿ ಕೋವಿಡ್-19 ಮತ್ತು ಓಮಿಕ್ರಾನ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಕೋವಿಡ್ ಪಾಸಿಟಿವ್ ಗೆ ಒಳಗಾಗುತ್ತಿದ್ದಾರೆ.ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಮತ್ತೆ ಕೋವಿಡ್ ಪಾಸಿಟೀವ್ ಸೋಂಕಿಗೆ ಒಳಗಾಗಿದ್ದಾರೆ. ಅರ್ಜುನ್ ಜೊತೆಗೆ ರಿಯಾ ಕಪೂರ್, ಕರಣ್ ಬೂಲಾನಿ, ಅಂಶುಲಾ ಕಪೂರ್ ಅವರು ಸಹ ಕೋವಿಡ್ -19 ಗೆ ತುತ್ತಾಗಿದ್ದಾರೆ.
ಕರೀನಾ ಕಪೂರ್ ಕೋವಿಡ್ -19 ವಿರುದ್ಧ ಹೋರಾಡಿದ ನಂತರ, ಅರ್ಜುನ್ ಕಪೂರ್ ಮತ್ತು ಸಹೋದರಿ ಅಂಶುಲಾ ಕಪೂರ್ ಅವರು ಕೋವಿಡ್ ಪಾಸಿಟಿವ್ ಟೆಸ್ಟ್ ಗೆ ಒಳಗಾಗಿದ್ದಾರೆ. ಸಹೋದರ-ಸಹೋದರಿ ಇಬ್ಬರೂ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ತಮ್ಮ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಕೋವಿಡ್ ಟೆಸ್ಟ್ ಮಾಡಿಸಲು ಕೇಳಿಕೊಂಡಿದ್ದಾರೆ.
ಅರ್ಜುನ್ ಕಪೂರ್ ಸೆಪ್ಟೆಂಬರ್ 2020 ರಂದು ಕೋವಿಡ್ ಗೆ ಮೊದಲ ಸಲ ಒಳಗಾಗಿದ್ದರು . , “ನನಗೆ ಕರೋನಾ ಪಾಸಿಟೀವ್ ಬಂದಿದೆ ಎಂದು ನಿಮಗೆಲ್ಲರಿಗೂ ತಿಳಿಸುವುದು ನನ್ನ ಕರ್ತವ್ಯ. ನಾನು ಆರೋಗ್ಯವಾಗಿದ್ದೇನೆ. ಮತ್ತು ರೋಗ ಲಕ್ಷಣ ರಹಿತನಾಗಿದ್ದೇನೆ. ವೈದ್ಯರು ಮತ್ತು ಅಧಿಕಾರಿಗಳ ಸಲಹೆಯ ಮೇರೆಗೆ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನಿಮ್ಮ ಬೆಂಬಲಕ್ಕಾಗಿ ನಾನು ಎಲ್ಲರಿಗೂ ಮುಂಚಿತವಾಗಿ ಧನ್ಯವಾದಗಳು ಮತ್ತು ಮುಂಬರುವ ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ನಿಮಗೆಲ್ಲರಿಗೂ ತಿಳಿಸುತ್ತೇನೆ. ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.