ಸ್ಯಾಂಡಲ್ ವುಡ್ ನ ಯುವ ನಟ, ನಿರ್ಮಾಪಕ ಅರ್ಜುನ್ ಮಂಜುನಾಥ್ ಕೊರೊನಾಗೆ ಬಲಿ..!
ಬೆಂಗಳೂರು : ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ ನ ಯುವ ನಟ ಮತ್ತು ನಿರ್ಮಾಪಕ ಅರ್ಜುನ್ ಮಂಜುನಾಥ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ‘0% ಲವ್’ ಸಿನಿಮಾ ನಿರ್ಮಾಣ ಮಾಡಿ ನಟಿಸುತ್ತಿದ್ದ ಅರ್ಜುನ್ ಮಂಜುನಾಥ್ ಸಿನಿಮಾ ಬಿಡುಗಡೆಗೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಯುವ ನಟ ಹಾಗೂ ನಿರ್ಮಾಪಕನ ಸಾವಿಗೆ ಅನೇಕ ತಾರೆಯರು , ಆಪ್ತ ಬೆಂಬಲಿಗರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.








