Arjun Saud : ಧೋನಿಯಂತೆ ರನೌಟ್ ಮಾಡುವ ಚಾಣಾಕ್ಷ ವಿಕೆಟ್ ಕೀಪರ್ ಅರ್ಜುನ್..!
ನೇಪಾಳದ ವಿಕೆಟ್ ಕೀಪರ್ ಅರ್ಜುನ್ ಸೌದ್ ಧೋನಿಯಂತೆ ವಿಕೆಟ್ ಕೀಪಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತ ಕ್ರಿಕೆಟ್ ದಂತಕತೆ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವ ಮತ್ತು ಚಾಣಾಕ್ಷ ವಿಕೆಟ್ ಕೀಪಿಂಗ್ ಮೂಲಕ ಕ್ರಿಕೆಟ್ ಜಗತನ್ನು ನಿಬ್ಬೆರೆಗಾಗಿಸಿದವರು. ಮೈಕ್ರೊ ಸೆಕೆಂಡ್ನಲ್ಲಿ ಸ್ಟಪಿಂಗ್ ಮಾಡಿ ಬ್ಯಾಟರ್ಗಳಿಗೆ ಶಾಕ್ ಕೊಡುತ್ತಿದ್ದರು. ಧೋನಿಯ ಚಾಣಾಕ್ಷ ವಿಕೆಟ್ ಕೀಪಿಂಗ್ ಅನ್ನು ಯಾರು ಮರೆಯಲು ಸಾಧ್ಯವಿಲ್ಲ.
ಇದೀಗ ನೇಪಾಳದ ವಿಕೆಟ್ ಕೀಪರ್ ಅರ್ಜುನ್ ಸೌದ್ ಧೋನಿಯಂತೆ ರನೌಟ್ ಮಾಡಿ ಅಚ್ಚರಿಗೊಳಿಸಿದ್ದಾರೆ. ಇವರು ರನೌಟ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ. ಸ್ಥಳೀಯ ಕ್ರಿಕೆಟ್ ಟೂರ್ನಿ ಬಿರಾಟ್ ನಗರ್ ಮತ್ತು ಜನಕ್ ಪುರ ನಡುವಿನ ಪಂದ್ಯದ ವೇಳೆ ಅದ್ಭುತ ರೀತಿಯಲ್ಲಿ ರನೌಟ್ ಮಾಡಲಾಗಿದೆ. ವಿಕೆಟ್ ಕಡೆ ನೋಡದೇ ಫೀಲ್ಡರ್ ಎಸೆದ ಚೆಂಡನ್ನು ನೇರವಾಗಿ ವಿಕೆಟ್ ಹೊಡೆದಿದ್ದಾರೆ.
ಧೋನಿ ತಂತ್ರವನ್ನೆ ಬಳಸಿ ಅರ್ಜುನ್ ಸೌದ್ ವಿಕೆಟ್ ಕೀಪಿಂಗ್ನಲ್ಲಿ ಮಿಂಚುತ್ತಿದದ್ದಾರೆ.