ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತುತ್ತು ಅನ್ನಕ್ಕಾಗಿ ಪರದಾಡಿದ ಸಾರಿಕಾಗೆ ಇಂದು ಅರ್ಜುನ ಪ್ರಶಸ್ತಿ

admin by admin
August 25, 2020
in Newsbeat, Sports, ಕ್ರೀಡೆ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ತುತ್ತು ಅನ್ನಕ್ಕಾಗಿ ಪರದಾಡಿದ ಸಾರಿಕಾಗೆ ಇಂದು ಅರ್ಜುನ ಪ್ರಶಸ್ತಿ

ಔರಂಗಾಬಾದ್, ಅಗಸ್ಟ್25: ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಾತ್ರರಾಗಲಿರುವ ಮಾಜಿ ಭಾರತೀಯ ಮಹಿಳಾ ಖೋ-ಖೋ ಕ್ಯಾಪ್ಟನ್ ಸಾರಿಕಾ ಕೇಲ್ ಅವರು ಆರ್ಥಿಕ ಸಮಸ್ಯೆಗಳಿಂದಾಗಿ ಸುಮಾರು ಒಂದು ದಶಕದಿಂದ ದಿನಕ್ಕೆ ಒಂದೇ ಹೊತ್ತು ಊಟವನ್ನು ಮಾತ್ರ ಮಾಡುತ್ತಿದ್ದರು. ಆದರೆ ಕ್ರೀಡೆಯು ಅವರ ಜೀವನವನ್ನು ಬದಲಿಸಿತು. ಪ್ರಸ್ತುತ ಮಹಾರಾಷ್ಟ್ರ ಸರ್ಕಾರದಲ್ಲಿ ಕ್ರೀಡಾ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕೇಲ್ ಅವರಿಗೆ ಆಗಸ್ಟ್ 29 ರಾಷ್ಟ್ರೀಯ ಕ್ರೀಡಾ ದಿನದಂದು ನಡೆಯುವ ವರ್ಚುವಲ್ ಸಮಾರಂಭದಲ್ಲಿ ಅರ್ಜುನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Related posts

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

September 20, 2026
ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

September 20, 2026

ಈ ವರ್ಷ ಅರ್ಜುನ ಪ್ರಶಸ್ತಿಗೆ ನನ್ನನ್ನು ಹೆಸರಿಸಲಾಗಿದ್ದರೂ, ಖೋ ಖೋ ಆಡಿದ ದಿನಗಳು ನನಗೆ ಇನ್ನೂ ನೆನಪಿದೆ. ನಾನು ಸುಮಾರು ಒಂದು ದಶಕದಿಂದ ದಿನಕ್ಕೆ ಒಂದು ಹೊತ್ತು ಊಟವನ್ನು ಮಾತ್ರ ಮಾಡುತ್ತಿದ್ದೆ ಎಂದು 2016 ರಲ್ಲಿ ನಡೆದ 12 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ (ಎಸ್‌ಎಜಿ) ಭಾರತೀಯ ಮಹಿಳಾ ತಂಡವನ್ನು ಚಿನ್ನದತ್ತ ಕೊಂಡೊಯ್ದ ಸಾರಿಕಾ ಕೇಲ್ ತಿಳಿಸಿದ್ದಾರೆ. ನನ್ನ ಕುಟುಂಬದ ಸ್ಥಿತಿ ನನ್ನನ್ನು ಆಟವಾಡಲು ದೂಡಿತು. ಈ ಆಟವು ನನ್ನ ಜೀವನವನ್ನು ಬದಲಿಸಿತು ಮತ್ತು ಈಗ ನಾನು ಉಸ್ಮಾನಾಬಾದ್ ಜಿಲ್ಲೆಯ ತುಲ್ಜಾಪುರದಲ್ಲಿ ಕ್ರೀಡಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

27 ವರ್ಷದ ತನ್ನ ಚಿಕ್ಕಪ್ಪ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯಲ್ಲಿ ಈ ಕ್ರೀಡೆಯನ್ನು ಆಡುತ್ತಿದ್ದರು ಮತ್ತು 13 ನೇ ವಯಸ್ಸಿನಲ್ಲಿ ನನ್ನನ್ನು ಕ್ರೀಡಾಂಗಣಕ್ಕೆ ಕರೆದೊಯ್ದರು ಎಂದು ನೆನಪಿಸಿಕೊಂಡ ಸಾರಿಕಾ ಅಂದಿನಿಂದ ತಾನು ಈ ಆಟವನ್ನು ಮುಂದುವರಿಸಿರುವುದಾಗಿ ತಿಳಿಸಿದರು. ನನ್ನ ತಾಯಿ ಹೊಲಿಗೆ ಕೆಲಸ ಮಾಡುತ್ತಿದ್ದರು ಮತ್ತು ಇತರ ಮನೆಕೆಲಸಗಳನ್ನು ಮಾಡುತ್ತಿದ್ದರು. ನನ್ನ ತಂದೆಗೆ ದೈಹಿಕ ಸಮಸ್ಯೆಯಿಂದಾಗಿ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಇಡೀ ಕುಟುಂಬವು ನನ್ನ ಅಜ್ಜ-ಅಜ್ಜಿ ಗಳಿಸುವ ಸಂಪಾದನೆ ಮೇಲೆ ಅವಲಂಬಿತವಾಗಿತ್ತು ಎಂದು ಅವರು ತಮ್ಮ ಜೀವನದ ಪ್ರಯಾಣವನ್ನು ನೆನಪಿಸಿಕೊಂಡರು. ಆ ಸಮಯದಲ್ಲಿ, ನಾನು ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸುತ್ತಿದ್ದೆ. ನಾನು ಶಿಬಿರದಲ್ಲಿದ್ದಾಗ ಅಥವಾ ಕೆಲವು ಸ್ಪರ್ಧೆಗೆ ಹೋಗುತ್ತಿದ್ದಾಗ ಮಾತ್ರ ನಾನು ವಿಶೇಷ ಆಹಾರವನ್ನು ಪಡೆಯುತ್ತಿದ್ದೆ ಎಂದು ಸಾರಿಕಾ ತಾವು ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಕೇಲ್ ಅವರ ಕುಟುಂಬವು ಅವರನ್ನು ಬೆಂಬಲಿಸಿತು ಮತ್ತು ಪಂದ್ಯಾವಳಿಗಳಲ್ಲಿ ಆಡುವುದನ್ನು ಯಾವತ್ತೂ ತಡೆಯಲಿಲ್ಲ ಎಂದು ಅವರು ಹೇಳಿದ್ದಾರೆ.
ಹಿಂದೊಮ್ಮೆ ಹಣಕಾಸಿನ ತೊಂದರೆಯಿಂದಾಗಿ ಕೇಲ್ ಆಟವನ್ನು ತ್ಯಜಿಸಲು ನಿರ್ಧರಿಸಿದ್ದರು ಎಂದು ಅವರ ತರಬೇತುದಾರ ಚಂದ್ರಜಿತ್ ಜಾಧವ್ ಹೇಳಿದ್ದಾರೆ. 2016 ರಲ್ಲಿ, ಸಾರಿಕಾ ಅವರ ಕುಟುಂಬದ ಆರ್ಥಿಕ ಸಮಸ್ಯೆಗಳಿಂದ ತೊಂದರೆಗೀಡಾದರು ಮತ್ತು ಆಟವನ್ನು ತ್ಯಜಿಸಲು ಸಹ ನಿರ್ಧರಿಸಿದ್ದರು. ಅವರ ಅಜ್ಜಿ ಹಾಗೆ ಮಾಡದಂತೆ ತಡೆದಿದ್ದರು ಮತ್ತು ಕೌನ್ಸೆಲಿಂಗ್ ನಂತರ ಸಾರಿಕಾ ಮತ್ತೆ ತನ್ನ ಆಟವನ್ನು ಮುಂದುವರೆಸಿದರು. ಇದು ‌ಅವರ ಬದುಕಿನ ಮಹತ್ವದ ತಿರುವು ಎಂದು ತರಬೇತುದಾರ ಜಾಧವ್ ತಿಳಿಸಿದರು.

site

ಸಾರಿಕಾ 2016 ರಲ್ಲಿ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್ ಗೆದ್ದ ತಂಡದ ಭಾಗವಾಗಿದ್ದರು. ಆ ಪಂದ್ಯಾವಳಿಯಲ್ಲಿ ಟೂರ್ನಮೆಂಟ್ ಆಟಗಾರ್ತಿ ಪ್ರಶಸ್ತಿಯನ್ನೂ ಸಹ‌ ಗೆದ್ದಿದ್ದರು ಎಂದು ಖೋ ಖೋ ಫೆಡರೇಶನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿಯೂ ಆಗಿರುವ ಜಾಧವ್ ನೆನಪಿಸಿಕೊಂಡರು. ಕಳೆದ 10 ವರ್ಷಗಳಲ್ಲಿ ಸಾರಿಕಾ ಕಾಳೆ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ.

Tags: Arjuna AwardFormer Indian woman Kho-Kho captain Sarika KaleKho-KhoLatestnewsSarika KaleSports
ShareTweetSendShare
Join us on:

Related Posts

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

ಲೂಟಿ ಮಾಡಿ ಜೈಲಿಗೆ ಹೋದವರಿಂದ ನಾನು ಕಲಿಯಬೇಕಿಲ್ಲ:ವಂದೇ ಮಾತರಂ ಹಾಡೋಕೆ ಬರುತ್ತಾ?ರೆಡ್ಡಿ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ

by Shwetha
September 20, 2026
0

ರಾಜ್ಯ ರಾಜಕಾರಣದಲ್ಲಿ ಈಗ ವಾಗ್ಯುದ್ಧದ ಪರ್ವ ಶುರುವಾಗಿದೆ. ಉಮರ್ ಖಾಲಿದ್ ವಿಚಾರವಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್...

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

ಇವರ ಸೆಕ್ಯೂರಿಟಿ ಯಾವನಿಗೆ ಬೇಕು ಕರಾವಳಿ ಮೀನುಗಾರರ ಪರ ನಿಂತ ಡಿ ಕೆ ಶಿವಕುಮಾರ್: ಜನರ ಹೊಟ್ಟೆಪಾಡಿಗೆ ಕಲ್ಲು ಹಾಕಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲು ಸಿಎಂ ಖಡಕ್ ಸೂಚನೆ

by Shwetha
September 20, 2026
0

ಕರಾವಳಿ ಪ್ರವಾಸದಲ್ಲಿದ್ದಾಗ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶುಕ್ರವಾರ ಬೆಳ್ಳಂಬೆಳಗ್ಗೆ ಮಂಗಳೂರಿನ ಹಳೆ ಬಂದರಿನ ಮೀನುಗಾರಿಕಾ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ತೀವ್ರ ಆಕ್ರೋಶ...

ಯುಪಿಐ ಶುಲ್ಕದ ಬಿಸಿ: ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಪಾವತಿಗೆ ಮಾಲೀಕರ ಪಟ್ಟು-ಸ್ಕ್ಯಾನ್ ಮಾಡುವ ಮುನ್ನ ಎಚ್ಚರ,ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಹಿಡಿದು ಕ್ಯೂ ನಿಲ್ಲುವ ಕಾಲ ಬಂದಿತಾ!?

ಯುಪಿಐ ಶುಲ್ಕದ ಬಿಸಿ: ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಪಾವತಿಗೆ ಮಾಲೀಕರ ಪಟ್ಟು-ಸ್ಕ್ಯಾನ್ ಮಾಡುವ ಮುನ್ನ ಎಚ್ಚರ,ಪೆಟ್ರೋಲ್ ಬಂಕ್‌ಗಳಲ್ಲಿ ನಗದು ಹಿಡಿದು ಕ್ಯೂ ನಿಲ್ಲುವ ಕಾಲ ಬಂದಿತಾ!?

by Shwetha
September 20, 2026
0

ಡಿಜಿಟಲ್ ಇಂಡಿಯಾದತ್ತ ದಾಪುಗಾಲು ಹಾಕುತ್ತಿರುವ ಸಾಮಾನ್ಯ ಜನರಿಗೆ ಈಗ ಕೇಂದ್ರದ ಹೊಸ ನಿಯಮವೊಂದು ಶಾಕ್ ನೀಡಿದೆ. ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಯುಪಿಐ ಸೇವಾ ಶುಲ್ಕದ ನಿಯಮವು...

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಬ್ರೇಕ್: ವಿದ್ಯಾರ್ಥಿಗಳ ಮೊಬೈಲ್ ಚಿತ್ರೀಕರಣಕ್ಕೆ ಸರ್ಕಾರದಿಂದ ನಿರ್ಬಂಧ

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಬ್ರೇಕ್: ವಿದ್ಯಾರ್ಥಿಗಳ ಮೊಬೈಲ್ ಚಿತ್ರೀಕರಣಕ್ಕೆ ಸರ್ಕಾರದಿಂದ ನಿರ್ಬಂಧ

by Shwetha
September 20, 2026
0

ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಹೆಚ್ಚು ಸುರಕ್ಷಿತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಕಾಲೇಜುಗಳು ಆಯೋಜಿಸುವ ಶೈಕ್ಷಣಿಕ ಪ್ರವಾಸಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು...

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

ಎಸ್‌ಸಿ ಕೋಟಾದಡಿ ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದರಾ ಖರ್ಗೆ ಕುಟುಂಬ!:ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂ ಹಗರಣದ ಬಗ್ಗೆ ವಿಶೇಷ ಕೋರ್ಟ್‌ನಿಂದ ಲೋಕಾಯುಕ್ತ ಎಸ್ಪಿಗೆ ಸಮನ್ಸ್

by Shwetha
September 20, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಮಾಲೀಕತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ ವತಿಯಿಂದ ಅಕ್ರಮವಾಗಿ ನಿವೇಶನ ಮಂಜೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram