IND vs AUS T20: ಟಿಕೆಟ್ ಖರೀದಿಗೆ ನೂಕು ನುಗ್ಗಲು – ಲಾಠಿ ಚಾರ್ಜ್
ಭಾರತ-ಆಸ್ಟ್ರೇಲಿಯಾ ಸರಣಿಯ ಮೂರನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಖರೀದಿಸಲು ನೂಕು ನುಗ್ಗಲು ಉಂಟಾಗಿದ್ದರಿಂದ ಸಿಕಂದರಾಬಾದ್ನ ಜಿಮ್ಖಾನಾ ಮೈದಾನದಲ್ಲಿ ಹೈದರಾಬಾದ್ ನಗರ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕಾಲ್ತುಳಿತದಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಪೊಲೀಸರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಸೆಪ್ಟೆಂಬರ್ 25 ರಂದು ನಡೆಯಲಿರುವ ಸರಣಿಯ ಅಂತಿಮ ಪಂದ್ಯದ ಟಿಕೆಟ್ಗಳನ್ನು ಖರೀದಿಸಲು ಪ್ರೇಕ್ಷಕರು ಸರತಿ ಸಾಲಿನಲ್ಲಿ ನಿಂತಿದ್ದರು. ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಟಿಕೆಟ್ ಕೌಂಟರ್ಗಳ ಹೊರಗೆ ಸರತಿ ಸಾಲು ಆರಂಭವಾಗಿದೆ ಎನ್ನಲಾಗಿದೆ.
#Hyderabad: Around 20 were injured in stamped at Gymkhana Ground after a crowd gathered to buy tickets for the #IndVsAus match in the city.@TheSouthfirst pic.twitter.com/yhOmv6e4ze
— Sumit Jha (@sumitjha__) September 22, 2022
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ Paytm ಆನ್ಲೈನ್ ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರ ಜಿಮ್ಖಾನಾ ಮೈದಾನದ ಹೊರಗೆ 4 ಕಿಲೋಮೀಟರ್ಗಳಷ್ಟು ಉದ್ದದ ಸರದಿಯಲ್ಲಿ ಟಿಕೆಟ್ ಖರೀದಿಸಲು ಉತ್ಸಾಹಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟಿಕೆಟ್ಗಳ ಮಾರಾಟವು ಬುಧವಾರ ಪ್ರಾರಂಭವಾಗಬೇಕಿತ್ತು, ಆದರೆ ಎಚ್ಸಿಎ ಅದನ್ನು ಮರುದಿನಕ್ಕೆ ಮುಂದೂಡಿತ್ತು.
“ನಾವು ಬೆಳಿಗ್ಗೆ ಆರು ಗಂಟೆಗೆ ಬಂದು ಏಳರಿಂದ ಗಂಟೆಗಳ ಕಾಲ ಸಾಲಿನಲ್ಲಿ ನಿಂತಿದ್ದೇವೆ. ಬೆಳಗ್ಗೆ 10 ಗಂಟೆಗೆ ಟಿಕೆಟ್ ಕೌಂಟರ್ ತೆರೆಯಲಾಯಿತು. ಟಿಕೆಟ್ ಕೊಳ್ಳಲು ಅಪಾರ ಜನಸ್ತೋಮವೇ ನೆರೆದಿತ್ತು. ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಬೆಳಗ್ಗೆ 10 ಗಂಟೆಯ ನಂತರ ಜನರು ಗ್ರೌಂಡ್ ಗೇಟ್ ಮುರಿದು ಟಿಕೆಟ್ ಕೌಂಟರ್ ಕಡೆಗೆ ನುಗ್ಗಿದರು. ಅನೇಕ ಜನರು ನೆಲದ ಮೇಲೆ ಬಿದ್ದು ಗಾಯಗೊಂಡರು, ”ಎಂದು ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಾದ ಬೆಂಬಲಿಗ ರೋಹಿತ್ ಇಂಗ್ಲೀಷ್ ಸುದ್ದಿ ಮಾಧ್ಯಮ ಸೌತ್ ಫಸ್ಟ್ಗೆ ತಿಳಿಸಿದ್ದಾರೆ.
ಮೂರು ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಹೈದರಾಬಾದ್ಗೆ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಸಿಎ ನಿರ್ವಹಣೆ ಸರಿಯಾಗಿಲ್ಲ ಎಂದು ಆರೋಪಿಸಿದ್ದಾರೆ.