ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಅರೆಸ್ಟ್ ವಾರೆಂಟ್
ತೆಹ್ರಾನ್, ಜೂನ್ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಸುಮಾರು 30 ಜನರ ವಿರುದ್ಧ ಇರಾನ್ ಸೇನಾಪಡೆಯ ಕಮಾಂಡರ್ ಖಾಸಿಮ್ ಸೊಲೇಮನಿ ಹತ್ಯೆ ಪ್ರಕರಣ ಸಂಬಂಧಿಸಿ, ಇರಾನ್ ಸರ್ಕಾರವು ಅರೆಸ್ಟ್ ವಾರೆಂಟ್ ಹೊರಡಿಸಿದೆ. ಅಷ್ಟೇ ಅಲ್ಲ ಡೊನಾಲ್ಡ್ ಟ್ರಂಪ್ ಅವರನ್ನ ಬಂಧಿಸುವ ಸಲುವಾಗಿ ಇಂಟರ್ಪೋಲ್ನ ಸಹಾಯ ಕೋರಿದೆ ಎಂದು ತಿಳಿದು ಬಂದಿದೆ.
ಟ್ರಂಪ್ ಆದೇಶದ ಮೇರೆಗೆ ಅಮೆರಿಕಾ ಸೇನೆ ಜನವರಿ 3 ರಂದು ಇರಾನ್ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ವಾಯುದಾಳಿ ನಡೆಸಿ ‘ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ)’ ಕ್ವಾಡ್ಸ್ ಫೋರ್ಸ್ ಘಟಕದ ಮುಖ್ಯಸ್ಥ ಜನರಲ್ ಖಾಸಿಮ್ ಸುಲೈಮಾನಿ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಇರಾನ್, ಟ್ರಂಪ್ ಸೇರಿದಂತೆ ಅಮೆರಿಕಾದ ಪ್ರಮುಖ 30 ಅಧಿಕಾರಿಗಳ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಿದ್ದು, ಅಮೆರಿಕ ಅಧ್ಯಕ್ಷನನ್ನು ವಶಕ್ಕೆ ಪಡೆಯಲು ಸಹಾಯ ಮಾಡಿ ಎಂದು ಇಂಟರ್ಪೋಲ್ನ್ನು ಕೇಳಿಕೊಂಡಿದೆ. ಅಷ್ಟೇ ಅಲ್ಲ ಸೇನಾ ಕಮಾಂಡರ್ ಹತ್ಯೆಯನ್ನು ಟ್ರಂಪ್ ಅವರೇ ಮಾಡಿಸಿರುವುದಾಗಿ ಇರಾನ್ ಆರೋಪಿಸಿದೆ.